ಪುತ್ತೂರು : ಸಾಯಿಕಲಾ ಯಕ್ಷ ಬಳಗ ಹಾಗೂ ಡಾ.ಶಿವರಾಮ ಕಾರಂತ ಬಾಲವನ ಜಂಟಿ ಆಶ್ರಯದಲ್ಲಿ ನಡೆಯುವ ಯಕ್ಷಗಾನ ನಾಟ್ಯ ತರಬೇತಿ ಇತ್ತೀಚೆಗೆ ಪುತ್ತೂರಿನ ಡಾ. ಶಿವರಾಮ ಕಾರಂತ ಬಾಲವನದಲ್ಲಿ ನಡೆಯಿತು.
ಯಕ್ಷಗಾನ ಕಲಾವಿದ ಬಾಲಸುಬ್ರಹ್ಮಣ್ಯ ಭಟ್ ಗುತ್ತಿಗಾರು ತರಬೇತಿ ಉದ್ಘಾಟಿಸಿದರು. ಮರಾಟಿ ಸಂಘದ ಅಧ್ಯಕ್ಷ ಅಶೋಕ್ ನಾಯಕ್ ಕೆದಿಲ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಕೃಷ್ಣಪ್ಪ ಪೂಜಾರಿ ಕಿನ್ಯ ಭಾಗವಹಿಸಿದರು.
ಪ್ರಸಕ್ತ ಪ್ರಾರ್ಥನೆ ಹಾಡಿದರು. ಶ್ರೀ ಸಾಯಿ ಕಲಾ ಯಕ್ಷ ಬಳಗದ ಸಂಚಾಲಕಿ ಪ್ರೇಮ ಕಿಶೋರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜ್ಯೋತಿ ಸ್ವಾಗತಿಸಿ, ಡಾ. ಅನನ್ಯ ಲಕ್ಷ್ಮಿ ವಂದಿಸಿದರು. ವರ್ಷ ಕಾರ್ಯಕ್ರಮ ನಿರೂಪಿಸಿದರು.
























