ಪುತ್ತೂರು : ಮನಜನ ಚಾರಿಟೇಬಲ್ ಟ್ರಸ್ಟ್ ನಿಂದ ನಿರ್ಗನ್ ಹಾಗೂ ಸುಫಿ ಹಾಡುಗಳ ಮನಜನ ಸಂಗೀತ ಹಬ್ಬ ‘ಅಸೀಮ’ ಜ.4 ರಂದು ಮಂಜಲ್ಪಡ್ಪು ಸುದಾನ ಶಾಲಾ ಗ್ರೌಂಡ್‍ನಲ್ಲಿ ನಡೆಯಲಿದೆ ಎಂದು ಮನಜನ ಟ್ರಸ್ಟ್ ನ ಮೆನೆಜಿಂಗ್ ಟ್ರಸ್ಟಿ ಸೌಮ್ಯ ಭಟ್ ತಿಳಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮನಸ್ಸಿನ ಆರೋಗ್ಯ, ನಾವು ಎದುರಿಸುವ ಮಾನಸಿಕ ಖಾಯಿಲೆ, ತೊಂದರೆ, ಸವಾಲುಗಳನ್ನು ಪರಿಹರಿಸುವ ಹಾಗೂ ನಿಭಾಯಿಸುವ ರೀತಿಗಳು ಮುಂತಾದ ವಿಚಾರಗಳ ಕುರಿತು ಅರಿವು ಮೂಡಿಸುವುದು ನಮ್ಮ ಆಶಯವಾಗಿದ್ದು, ಈಗಾಗಲೇ ಟ್ರಸ್ಟ್ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಪೋಸ್ಟರ್‍ಗಳನ್ನು ಹಂಚಿಕೊಳ್ಳುತ್ತಿದೆ. ಅಲ್ಲದೆ ಮಾನಸಿಕ ಆರೋಗ್ಯ ಕುರಿತು ಅರಿವು ಮೂಡಿಸುವ ಮಾತುಕತೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ ಎಂದ ಅವರು, ಮುಖ್ಯವಾಗಿ ಸಂಗೀತ, ಕಲೆ, ಸಿನಿಮಾ ಹಬ್ಬಗಳ ಮೂಲಕ ಕೆಲಸ ಮಾಡಬೇಕೆನ್ನುವುದು ನಮ್ಮ ಇಂಗಿತವಾಗಿದೆ ಎಂದರು.
ಅಸೀಮ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶದ ಇಂದೋರ್ ನ ಪ್ರಹ್ಲಾದ್ ತಿಪಾನಿಯಾ ಹಾಗೂ ತಂಡ ಮತ್ತು ಬಸು ಖಾನ್ ಹಾಗೂ ತಂಡದಿಂದ ಸುಫಿ ಹಾಗೂ ನಿರ್ಗನ್ ಹಾಡುಗಳು ಪ್ರಸ್ತುತಗೊಳ್ಳಲಿವೆ ಎಂದು ತಿಳಿಸಿದರು.
ಮರುದಿನ ಜ.5 ರಂದು ಪುತ್ತೂರಿನ ಡಾ.ಶಿವರಾಮ ಕಾರಂತ ಬಾಲವನದಲ್ಲಿ ಇದೇ ತಂಡದಿಂದ ವರ್ಕ್‍ಶಾಪ್ ನಡೆಯಲಿದೆ. ಕಾರ್ಯಕ್ರಮ ಸಂಪೂರ್ಣ ಉಚಿತವಾಗಿದ್ದು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮನಜನ ಚಾರಿಟೇಬಲ್ ಟ್ರಸ್ಟ್ ನ ಸದಸ್ಯೆ ಮೈತ್ರಿಶೀಲ ಕುಕ್ಕಾಜೆ ಉಪಸ್ಥಿತರಿದ್ದರು.
























