ಮಂಗಳೂರು : ಹಿಂದೂ ಯುವತಿಯೊಬ್ಬಳಿಗೆ ಸಹಾಯ ಮಾಡುವ ನೆಪದಲ್ಲಿ ಬಂದು ಅನ್ಯಕೋಮಿನ ಕಾಮುಕನೊಬ್ಬ ಆಕೆಗೆ ಅಮಲು ಪದಾರ್ಥ ನೀಡಿ ಅತ್ಯಾಚಾರಗೈದ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಅತ್ಯಾಚಾರದ ಬಗ್ಗೆ ಯುವತಿ ಠಾಣೆಗೆ ದೂರು ನೀಡಿದ ಬಳಿಕ ಕಾಮುಕ ಮೊಹಮ್ಮದ್ ಶಫೀನ್ ವಿದೇಶಕ್ಕೆ ಪರಾರಿಯಾಗಿದ್ದಾನೆ,ಇದೀಗ ಆರೋಪಿಯ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿಯಾಗಿದೆ.
ಈ ಪ್ರಕರಣದ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಇಂಟ್ರೆಸ್ಟಿಂಗ್ ಮಾಹಿತಿ ನೀಡಿದ್ದಾರೆ.. ಜು.21ರಂದು ಕೆಟ್ಟು ಹೋದ ಕಾರು ಸರಿಪಡಿಸುವಂತೆ ಯವತಿಯೊಬ್ಬಳು ಶಫೀನ್ ಸಹಾಯ ಕೇಳಿದ್ದಾಳೆ. ಸಹಾಯ ಮಾಡುವ ನಿಟ್ಟಿನಲ್ಲಿ ಸ್ನೇಹ ಬೆಳೆಸಿದ ಕಾಮುಕ ಮೊಹಮ್ಮದ್ ಶಫೀನ್ ಆಕೆಗೆ ಜ್ಯೂಸ್ ನಲ್ಲಿ ಅಮಲು ಪದಾರ್ಥ ನೀಡಿ ಆಕೆಯ ಅಪಾರ್ಟೆಂಟ್ ನಲ್ಲಿ ದೈಹಿಕ ಸಂಪರ್ಕ ಬೆಳೆಸಿದಲ್ಲದೆ. ವಿಡಿಯೋ ಮಾಡಿದ್ದಾನೆ.
ವಿಡಿಯೋವನ್ನು ಮೂಲ ಆಧಾರವನ್ನಾಗಿಸಿಕೊಂಡು ಯುವತಿಯ ಮೇಲೆ ಅತ್ಯಾಚಾರ ಮಾಡಿ, ಆಕೆಯಿಂದ ಹಣ ವಸೂಲಿ ಮಾಡುತ್ತಿದ್ದುದಲ್ಲದೆ. ಆಕೆಯ ಕಾರನ್ನು ಕೂಡ ವಶಪಡಿಸಿಕೊಂಡಿದ್ದಾನೆ.
ಮತ್ತೊಂದು ಮಹತ್ತರವಾದ ಮಾಹಿತಿ ಏನಂದೆ ಮೊಹಮ್ಮದ್ ಶಫೀನ್ ಮಾತ್ರವಲ್ಲದೆ ಆತನ ಸಹೋದರ ಮೊಹಮ್ಮದ್ ಸಿಯಾಬ್ ಕೂಡ ಯುವತಿಗೆ ಕಿರುಕುಳ ನೀಡಿದ್ದಾನೆ. ಸದ್ಯ, ಯುವತಿ ಮೊಹಮ್ಮದ್ ಶಮೀನ್ ಹಾಗೂ ಆತನ ಸಹೋದರನ ವಿರುದ್ಧ ದೂರು ನೀಡಿದನ್ನು ತಿಳಿದು, ಆರೋಪಿ ವಿದೇಶಕ್ಕೆ ಪರಾರಿಯಾಗಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪೊಲೀಸ್ ಆಯುಕ್ತ ಅನುಮಪ್ ಅಗರ್ವಾಲ್’,ಯುವತಿ ತಡವಾಗಿ ಪ್ರಕರಣ ದಾಖಲಿಸಿದ್ದರೂ ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಸದ್ಯ, ಆರೋಪಿ ವಿದೇಶಕ್ಕೆ ಪರಾರಿಯಾಗಿದ್ದಾನೆ, ಈ ಹಿನ್ನಲೆ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿದೆ’ ಎಂದಿದ್ದಾರೆ.
























