ಪಾರಾ ಒಲಿಂಪಿಕ್ಸ್‌ಗೆ ಅದ್ದೂರಿ ತೆರೆ : ಭಾರತ ಐತಿಹಾಸಿಕ 29 ಪದಕ ಸಾಧನೆ | 220 ಪದಕಗಳೊಂದಿಗೆ ಚೀನ ಅಗ್ರಸ್ಥಾನಿ

ಪ್ಯಾರಿಸ್‌ : ಆಗಸ್ಟ್ 28 ರಿಂದ ಶುರುವಾದ ಪ್ಯಾರಿಸ್ ಪಾರಾ ಒಲಿಂಪಿಕ್ಸ್​ ಭಾನುವಾರ ರಾತ್ರಿ ಅದ್ದೂರಿಯಾಗಿ ಮುಕ್ತಾಯಗೊಂಡಿದೆ. ಸ್ಟೇಡ್ ಡಿ ಫ್ರಾನ್ಸ್ ಮೈದಾನದಲ್ಲಿ ನಡೆದ ವರ್ಣರಂಜಿತ ಸಮಾರೋಪ ಸಮಾರಂಭದಲ್ಲಿ 17ನೇ ಆವೃತ್ತಿಯ ಪಾರಾ ಒಲಿಂಪಿಕ್ಸ್​ಗೆ ತೆರೆ ಎಳೆಯಲಾಯಿತು. ಮುಂದಿನ ಪಾರಾ ಒಲಿಂಪಿಕ್ಸ್​ ಆತಿಥ್ಯದ ಧ್ವಜವನ್ನು ಅಮೆರಿಕಕ್ಕೆ ಹಸ್ತಾಂತರಿಸಲಾಗಿದೆ.

ಭಾರತವನ್ನು ಹರ್ವಿಂದರ್ ಸಿಂಗ್ ಮತ್ತು ಅಥ್ಲೀಟ್ ಪ್ರೀತಿ ಪಾಲ್ ಧ್ವಜಧಾರಿಗಳಾಗಿ ಮುನ್ನಡೆಸಿದರು. ಇಬ್ಬರೂ ಭಾರತೀಯ ತ್ರಿವರ್ಣ ಧ್ವಜದೊಂದಿಗೆ ಸಮಾರೋಪ ಸಮಾರಂಭದಲ್ಲಿ ಕಾಣಿಸಿಕೊಂಡರು. ಈ ವರ್ಣರಂಜಿತ ಸಮಾರಂಭವು ಸಂಗೀತ, ಬೆಳಕಿನ ವೈಭವದೊಂದಿಗೆ ಪ್ರೇಕ್ಷಕರ ಮನಸೊರೆಗೊಂಡಿದೆ.

ಭಾರತಕ್ಕೆ 29 ಪದಕ





















































 
 

ಪ್ಯಾರಿಸ್ ಪಾರಾ ಒಲಿಂಪಿಕ್ಸ್​ನಲ್ಲಿ ಅತ್ಯಧಿಕ ಪದಕ ಗೆದ್ದಿದ್ದು ಚೀನ. 94 ಚಿನ್ನ, 76 ಬೆಳ್ಳಿ ಮತ್ತು 50 ಕಂಚಿನ ಪದಕಗಳೊಂದಿಗೆ ಚೀನ ಅಗ್ರಸ್ಥಾನವನ್ನು ಅಲಂಕರಿಸಿದೆ. ಗ್ರೇಟ್ ಬ್ರಿಟನ್ 124 ಪದಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದರೆ, ಯುಎಸ್​ಎ 105 ಪದಕ ಗೆದ್ದು ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ನೆದರ್​ಲ್ಯಾಂಡ್ಸ್​ 56 ಪದಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

ಈ ಬಾರಿ ಅಮೋಘ ಪ್ರದರ್ಶನ ನೀಡುವ ಮೂಲಕ ಭಾರತೀಯ ಕ್ರೀಡಾಪಟುಗಳು ಒಟ್ಟು 29 ಪದಕಗಳನ್ನು ಗೆದ್ದಿದ್ದಾರೆ. ಇದರಲ್ಲಿ 7 ಚಿನ್ನ, 9 ಬೆಳ್ಳಿ ಹಾಗೂ 13 ಕಂಚಿನ ಪದಕಗಳು ಸೇರಿವೆ. ಈ ಮೂಲಕ ಒಟ್ಟು 29 ಪದಕಗಳೊಂದಿಗೆ 18ನೇ ಸ್ಥಾನ ಪಡೆದುಕೊಂಡಿದೆ.

1 thought on “ಪಾರಾ ಒಲಿಂಪಿಕ್ಸ್‌ಗೆ ಅದ್ದೂರಿ ತೆರೆ : ಭಾರತ ಐತಿಹಾಸಿಕ 29 ಪದಕ ಸಾಧನೆ | 220 ಪದಕಗಳೊಂದಿಗೆ ಚೀನ ಅಗ್ರಸ್ಥಾನಿ”

  1. We are proud of Indians. It’s all about paraolympics & it’s not normal people who is participating. Feel really great looking at our medal winners. Best wishes to all of them.Next time we can try hard & win more medals.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top