ಪ್ಯಾರಿಸ್ : ಆಗಸ್ಟ್ 28 ರಿಂದ ಶುರುವಾದ ಪ್ಯಾರಿಸ್ ಪಾರಾ ಒಲಿಂಪಿಕ್ಸ್ ಭಾನುವಾರ ರಾತ್ರಿ ಅದ್ದೂರಿಯಾಗಿ ಮುಕ್ತಾಯಗೊಂಡಿದೆ. ಸ್ಟೇಡ್ ಡಿ ಫ್ರಾನ್ಸ್ ಮೈದಾನದಲ್ಲಿ ನಡೆದ ವರ್ಣರಂಜಿತ ಸಮಾರೋಪ ಸಮಾರಂಭದಲ್ಲಿ 17ನೇ ಆವೃತ್ತಿಯ ಪಾರಾ ಒಲಿಂಪಿಕ್ಸ್ಗೆ ತೆರೆ ಎಳೆಯಲಾಯಿತು. ಮುಂದಿನ ಪಾರಾ ಒಲಿಂಪಿಕ್ಸ್ ಆತಿಥ್ಯದ ಧ್ವಜವನ್ನು ಅಮೆರಿಕಕ್ಕೆ ಹಸ್ತಾಂತರಿಸಲಾಗಿದೆ.
ಭಾರತವನ್ನು ಹರ್ವಿಂದರ್ ಸಿಂಗ್ ಮತ್ತು ಅಥ್ಲೀಟ್ ಪ್ರೀತಿ ಪಾಲ್ ಧ್ವಜಧಾರಿಗಳಾಗಿ ಮುನ್ನಡೆಸಿದರು. ಇಬ್ಬರೂ ಭಾರತೀಯ ತ್ರಿವರ್ಣ ಧ್ವಜದೊಂದಿಗೆ ಸಮಾರೋಪ ಸಮಾರಂಭದಲ್ಲಿ ಕಾಣಿಸಿಕೊಂಡರು. ಈ ವರ್ಣರಂಜಿತ ಸಮಾರಂಭವು ಸಂಗೀತ, ಬೆಳಕಿನ ವೈಭವದೊಂದಿಗೆ ಪ್ರೇಕ್ಷಕರ ಮನಸೊರೆಗೊಂಡಿದೆ.
ಭಾರತಕ್ಕೆ 29 ಪದಕ
ಪ್ಯಾರಿಸ್ ಪಾರಾ ಒಲಿಂಪಿಕ್ಸ್ನಲ್ಲಿ ಅತ್ಯಧಿಕ ಪದಕ ಗೆದ್ದಿದ್ದು ಚೀನ. 94 ಚಿನ್ನ, 76 ಬೆಳ್ಳಿ ಮತ್ತು 50 ಕಂಚಿನ ಪದಕಗಳೊಂದಿಗೆ ಚೀನ ಅಗ್ರಸ್ಥಾನವನ್ನು ಅಲಂಕರಿಸಿದೆ. ಗ್ರೇಟ್ ಬ್ರಿಟನ್ 124 ಪದಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದರೆ, ಯುಎಸ್ಎ 105 ಪದಕ ಗೆದ್ದು ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ನೆದರ್ಲ್ಯಾಂಡ್ಸ್ 56 ಪದಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.
ಈ ಬಾರಿ ಅಮೋಘ ಪ್ರದರ್ಶನ ನೀಡುವ ಮೂಲಕ ಭಾರತೀಯ ಕ್ರೀಡಾಪಟುಗಳು ಒಟ್ಟು 29 ಪದಕಗಳನ್ನು ಗೆದ್ದಿದ್ದಾರೆ. ಇದರಲ್ಲಿ 7 ಚಿನ್ನ, 9 ಬೆಳ್ಳಿ ಹಾಗೂ 13 ಕಂಚಿನ ಪದಕಗಳು ಸೇರಿವೆ. ಈ ಮೂಲಕ ಒಟ್ಟು 29 ಪದಕಗಳೊಂದಿಗೆ 18ನೇ ಸ್ಥಾನ ಪಡೆದುಕೊಂಡಿದೆ.

























We are proud of Indians. It’s all about paraolympics & it’s not normal people who is participating. Feel really great looking at our medal winners. Best wishes to all of them.Next time we can try hard & win more medals.