ಆರಿಕೋಡಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ಭೇಟಿ
ಪುತ್ತೂರು : ಫೆ.1 ರಿಂದ 3 ರ ತನಕ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಕೇಪುಲೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಬಾಲಾಲಯ ಪ್ರತಿಷ್ಠೆ ಹಾಗೂ ಅನುಜ್ಞಾ ಕಲಶ ಕಾರ್ಯಕ್ರಮದ ಅಂಗವಾಗಿ ಫೆ.2 ಗುರುವಾರ ದೇವಸ್ಥಾನಕ್ಕೆ ಅರಿಕೋಡಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ಭೇಟಿ ನೀಡಿ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ ಗೌಡ, ಜೀರ್ಣೋದ್ಧಾರ ಸಮಿತಿಯ ಮೋಹನ್ ಗೌಡ ಇಡ್ಯಡ್ಕ , ಗಣೇಶ್ ಉದನಡ್ಕ ,ಲೊಕೇಶ್ ಬಿ.ಎನ್, ಚೆನ್ನಪ್ಪ ನೂಜಿ ಉಪಸ್ಥಿತರಿದ್ದರು. ಗಿರಿಶಂಕರ ಸುಲಾಯ ಕಾರ್ಯಕ್ರಮ ನಿರೂಪಿಸಿದರು.

