ಪುತ್ತೂರು: ವೈದ್ಯಕೀಯ ವೃತ್ತಿ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸುವ ರಾಷ್ಟ್ರಮಟ್ಟದ, ನೀಟ್-2024 ಪರೀಕ್ಷೆಯಲ್ಲಿ ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ ಉತ್ತಮ ಫಲಿತಾಂಶ ಪಡೆದಿದ್ದಾರೆ.
6 ವಿದ್ಯಾರ್ಥಿಗಳು 600 ಕ್ಕಿಂತಲೂ ಅಧಿಕ ಅಂಕ, 16 ವಿದ್ಯಾರ್ಥಿಗಳು 500 ಕ್ಕಿಂತಲೂ ಅಧಿಕ ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ.
ಅನುಷಾ ಜೇನ್ ಪಾಯ್ಸ್ (642), ಅಭಿರಾಮ್ ಕೆ.ಟಿ. (625),ಅಭಿಶ್ರೀ ಎ.ಎಸ್. (619), ಭಾಗ್ಯಶ್ರೀ ರೈ (619), ಶೃಂಗಾ ನಾಯಕ್ ಪಿ. 616), ಹರ್ಷಿತಾ ರೈ (615), ಶ್ವೇತಾ ಐ. ಕೆ (585), ಪ್ರಿಯಾ (579), ಮಯೂರ್ ಡಿ.ಆರ್. (564), ವರುಣ್ ಎಂ. (564), ಆಶಿತಾ ಕೆ ಸಿ (562), ರಾಶಿ ಆರ್. ಎಸ್. (558), ನಿಧಿ ಎನ್. ಆಚಾರ್ಯ (544), ಚಂದನಲಕ್ಷ್ಮಿ ಪಿ.ಎನ್. (540), ಸುಮನಾ (528), ಶ್ರಾವ್ಯಲಕ್ಷ್ಮಿ ಕೆ (510) ಅಂಕಗಳನ್ನು ಗಳಿಸಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿ, ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು ಮತ್ತು ಉಪನ್ಯಾಸಕೇತರ ವೃಂದದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
























