ಪುತ್ತೂರು: ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿಗೆ ಪುತ್ತೂರಿನಿಂದ ಶಶಿಕುಮಾರ್ ರೈ ಬಾಲ್ಯೊಟ್ಟು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಸತತ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿ ಒಟ್ಟು 16 ಸ್ಥಾನಗಳಿಗೂ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದೆ. ಈ ಪೈಕಿ 15 ಮಂದಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
ಉಳಿದಂತೆ ಸುಳ್ಯದಿಂದ ಎಸ್.ಎನ್.ಮನ್ಮಥ, ಬೆಳ್ತಂಗಡಿಯಿಂದ ಕುಶಾಲಪ್ಪ ಗೌಡ ಪೂವಾಜೆ, ಬಂಟ್ವಾಳದಿಂದ ಟಿ.ಜಿ.ರಾಜಾರಾಮ್ ಭಟ್, ಮಂಗಳೂರಿನಿಂದ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಭಾಸ್ಕರ ಕೋಟ್ಯಾನ್, ವಾದಿರಾಜ ಶೆಟ್ಟಿ, ವಿನಯಕುಮಾರ್ ಸೂರಿಂಜೆ, ಉಡುಪಿಯಿಂದ ದೇವಿಪ್ರಸಾದ್ ಶೆಟ್ಟಿ, ಅಶೋಕ್ ರೈ, ಕುಂದಾಪುರದಿಂದ ರಾಜೀವ ಪೂಜಾರಿ, ಮಹೇಶ್ ಹೆಗ್ಡೆ, ಟಿಎಪಿಸಿಎಂಎಸ್ ನಿಂದ ಮೋನಪ್ಪ ಶೆಟ್ಟಿ ಎಕ್ಕಾರು, ಕ್ರೆಡಿಟ್ ಸಹಕಾರದಿಂದ ಜಯರಾಜ್ ರೈ ನಾಮಪತ್ರ ಸಲ್ಲಿಸಿದ್ದು, ಎಲ್ಲಾ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
ಉಳಿದಂತೆ ಹಾಲಿ ನಿರ್ದೇಶಕ ಎಸ್.ಬಿ.ಜಯರಾಮ ರೈ, ಸಂಜೀವ ಪೂಜಾರಿ ನಾಮಪತ್ರ ಸಲ್ಲಿಸಿದ್ದಾರೆ.
























