ಲೋಕಸಭೆ ಚುನಾವಣೆ | ಕಾಸರಗೋಡು ಕ್ಷೇತ್ರದಿಂದ ಸಮರ್ಥ ಅಭ್ಯರ್ಥಿ, ವಿದ್ಯಾವಂತೆ ಅಶ್ವಿನಿ ಎಂ.ಎಲ್.ಗೆ ಟಿಕೇಟ್

ಕಾಸರಗೋಡು ಲೋಕಸಭಾ ಕ್ಷೇತ್ರದ‌ ಸಮರ್ಥ ಅಭ್ಯರ್ಥಿಯಾಗಿ‌ ಅಶ್ವಿನಿ ಎಂ.ಎಲ್ ಅವರ ಹೆಸರು ಘೋಷಣೆ ಆಗಿದೆ.. ಈ ಮೂಲಕ ಒಂದು ವಿದ್ಯಾವಂತ, ಚುರುಕಾದ ಅಭ್ಯರ್ಥಿಯೊಬ್ಬರು ಕಾಸರಗೋಡಿಗೆ ಸಿಕ್ಕಿದ್ದಾರೆ.

ಬೆಂಗಳೂರಿನಲ್ಲಿ ಬೆಳೆದು ಮಂಜೇಶ್ವರದ ಸೊಸೆಯಾಗಿ ಬಂದು, ಮಂಜೇಶ್ವರ ವರ್ಕಾಡಿಯ ಖಾಸಗಿ ಶಾಲೆಯಲ್ಲಿ ಅಧ್ಯಾಪಕಿ ವೃತ್ತಿಯಲ್ಲಿ ತೊಡಗಿಸಿಕೊಂಡು ಮಂಜೇಶ್ವರದ ಹಿಂದುಳಿದ ಸಾಮಾಜಿಕ ಸ್ಥಿತಿಗತಿಗಳನ್ನು ಮನಗಂಡು ‌ಸಮಾಜ ಸೇವೆಗೆ ಇಳಿಯಬೇಕೆಂಬ ತುಡಿತದಿಂದ ಸಮಾಜ ಸೇವೆಗೆ ರಾಜಕೀಯ ಶಕ್ತಿಯೂ ಜೊತೆಗಿರಬೇಕು ಎಂಬ ಆಲೋಚನೆಯಿಂದ ಭಾರತೀಯ ಜನತಾ ಪಕ್ಷದ ಸದಸ್ಯತ್ವ ಪಡೆದು ಜನರ ಬಳಿಗೆ ತೆರಳಿದವರು ಅಶ್ವಿನಿ ಎಂ.ಎಲ್.

ಇವರ‌ ದೂರದೃಷ್ಟಿ, ಜನರನ್ನು ಸೆಳೆಯುವ ಗುಣ,‌ ಜನರಲ್ಲಿ ಬೆರೆಯುವ ಗುಣ, ಚುರುಕತನವನ್ನ ಗುರುತಿಸಿದ ಪಕ್ಷ ಇವರನ್ನು ಮಂಜೇಶ್ವರ ತಾಲೂಕು ಪಂಚಾಯತ್‌ನ ಕಡಂಬಾರ್ ಡಿವಿಷನ್ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆ ಮಾಡುತ್ತದೆ, ಪಕ್ಷದ ನಿರೀಕ್ಷೆಯನ್ನು ಹುಸಿಗೊಳಿಸದ ಅಶ್ವಿನಿ ಎಂ.ಎಲ್ ಅವರು ಕ್ಷೇತ್ರದ ಜನರ ನಂಬಿಕೆಯನ್ನು ಗಳಿಸಿಕೊಂಡು ಮೊದಲ ಪ್ರಯತ್ನದಲ್ಲೇ ವಿಜಯ ಪತಾಕೆ ಹಾರಿಸಿ ಭರ್ಜರಿ ಜಯದೊಂದಿಗೆ ತಾಲೂಕು ಪಂಚಾಯತ್ ಜನಪ್ರತಿನಿಧಿಯಾಗಿ‌ ಆಯ್ಕೆಯಾಗುತ್ತಾರೆ.





















































 
 

ಜನಪ್ರತಿನಿಧಿಯಾಗಿ ಆಯ್ಕೆಯಾದ ನಂತರವೂ ಅದರಲ್ಲೇ ಹುದುಗದೆ, ಪಕ್ಷದ ಕೆಲಸದಲ್ಲಿ ‌ತೊಡಗಿಸುವ ಇವರ ಸಂಘಟನಾ ಕಾರ್ಯಾಶೈಲಿಯನ್ನು ಕಂಡ ಪಕ್ಷದ ನೇತೃತ್ವ ಇವರಿಗೆ ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯೆಯ ಜವಾಬ್ದಾರಿಯನ್ನೂ ಹೆಗಲಲ್ಲಿ ಇರಿಸುತ್ತದೆ. ಇವರ ಸಾಮಾಜಿಕ ಜಾಲತಾಣ ಹಿಂಬಾಲಿಸುವವರಿಗೆ ಇವರ ಕಾರ್ಯಶೈಲಿಯ ಅರಿವು ಇರಬಹುದು, ಒಂದು ರಾಷ್ಟ್ರೀಯ ಮಟ್ಟದ ನೇತಾರೆಯಾಗಿ ಭಾರತದಾದ್ಯಂತ ಪಕ್ಷದ ಸಂಘಟನಾ ಕೆಲಸದಲ್ಲಿ ಕಾಲಿಗೆ ಚಕ್ರ ಕಟ್ಟಿದಂತೆ ತಿರುಗಾಡುವ ಅವರು, ಅದೇ ಸಮಯ ತಮ್ಮ ಬೂತ್‌ನ ಕಾರ್ಯಕ್ರಮವಾದರೂ, ತಮ್ಮ ಪಂಚಾಯತ್, ತಮ್ಮ ಮಂಡಲದ ಕಾರ್ಯಕ್ರಮವಾದರೂ ಅದೇ ಚುರುಕುತನದಿಂದ ಅಲ್ಲಿ ಭಾಗವಹಿಸಿರುತ್ತಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top