ಸುಬ್ರಹ್ಮಣ್ಯ: ಕಳೆದು ಹೋಗಿದ್ದ ಮಾಂಗಲ್ಯ ಸರವನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಘಟನೆ ಸುಬ್ರಹ್ಮಣ್ಯದಲ್ಲಿ ನಡೆದಿದೆ.
ಡಿ. 9ರಂದು ವಸತಿ ಗೃಹಕ್ಕೆ ಬಂದಿದ್ದ ಮೈಸೂರಿನ ಯಾತ್ರಾರ್ಥಿಗಳು ಡಿ. 10ರಂದು ತೆರಳಿದ್ದರು. ಬಳಿಕ ರೂಮ್ ಶುಚಿ ಮಾಡುವ ಸಂದರ್ಭದಲ್ಲಿ 5 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರ ದೊರಕಿದ್ದು, ಅದನ್ನು ಸುಬ್ರಹ್ಮಣ್ಯ ಠಾಣೆಗೆ ಒಪ್ಪಿಸಲಾಯಿತು. ಮಾಂಗಲ್ಯ ಸರ ಮಂಜುನಾಥ್ ಅವರ ಪತ್ನಿಯದ್ದಾಗಿತ್ತು.
ಸರದ ವಾರೀಸುದಾರರನ್ನು ಸುಬ್ರಹ್ಮಣ್ಯ ಠಾಣೆಗೆ ಬರಲು ಹೇಳಿ, ಎಸ್.ಐ. ಕಾರ್ತಿಕ್, ನಿವೃತ್ತ ಪ್ರಾಧ್ಯಾಪಕ ತಿಲಕ್ ಎ.ಎ., ಮಹೇಶ್ ಕೂರ್ಗ್ ಅವರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.
























