ಪುತ್ತೂರು: ಪುರುಷರಕಟ್ಟೆ ಆತ್ರೇಯ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ ಹಾಗೂ ಬೆದ್ರಾಳ ಶ್ರೀ ನಂದಿಕೇಶ್ವರ ಭಜನಾ ಮಂದಿರದ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ನಂದಿಕೇಶ್ವರ ಭಜನಾ ಮಂದಿರದ ವಠಾರದಲ್ಲಿ ನಡೆಯಿತು.
ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಅರುಣ್ ಜೈನ್ ಅಧ್ಯಕ್ಷತೆ ವಹಿಸಿದ್ದರು.
ಬ್ರಹ್ಮಶ್ರೀ ಉದಯ ತಂತ್ರಿ ಮಾತನಾಡಿ, ಆರೋಗ್ಯದ ವಿಚಾರವನ್ನು ಯಾರೂ ಕಡೆಗಣಿಸಬಾರದು. ಇಂತಹ ಶಿಬಿರದ ಮುಖಾಂತರ ಇಸಿಜಿ, ರಕ್ತದ ಒತ್ತಡ, ಮಧುಮೇಹ ತಪಾಸಣೆ ಮಾಡಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಸುಧೀಂದ್ರ ತಂತ್ರಿ ಕೆಮ್ಮಿಂಜೆ, ಚಂದ್ರ ಕೂಡಮಾರಾ ಉಪಸ್ಥಿತರಿದ್ದರು. 70ಕ್ಕೂ ಅಧಿಕ ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು. ಈ ಸಂದರ್ಭದಲ್ಲಿ ಬೇಸಿಕ್ ಹೆಲ್ತ್ ಚೆಕಪ್ ಪ್ಯಾಕೇಜನ್ನು ಅನಾವರಣಗೊಳಿಸಲಾಯಿತು.
























