ಪುತ್ತೂರು: ಬೆಂಗಳೂರಿನ ತಣೀಸಂದ್ರ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ನಡೆದ ವಿದ್ಯಾಭಾರತಿ ಸಂಯೋಜಿತ ಶಾಲೆಗಳ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಕಿಶೋರ ವರ್ಗ ವಿಭಾಗದಲ್ಲಿ ಜಿ.ಪ್ರತೀಕ್ಷಾ ಆಳ್ವ, 10ನೇ ತರಗತಿ 100ಮೀ ಫ್ರೀ ಸ್ಟೈಲ್ 200 ಮೀ. ಫ್ರೀ ಸ್ಟೈಲ್ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ, 50 ಮೀ. ಪ್ರೀ ಸ್ಟೈಲ್ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ, 10ನೇ ತರಗತಿಯ ವೇದ್‍ವೃತ್ ಭಂಡಾರಿ 50ಮೀ ಫ್ರೀ ಸ್ಟೈಲ್ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ, 100, 50 ಮೀ. ಬ್ರೆಸ್ಟ್ ಸ್ಟ್ರೋಕ್ ಹಾಗೂ 50 ಮೀ. ಫ್ರೀ ಸ್ಟೈಲ್ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿದ್ದಾರೆ.
ನಮನ್ ನಾಯ್ಕ್ 50 ಮೀ. ಬಟರ್ ಫ್ಲೈ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ, 100 ಮೀ. ಫ್ರೀ ಸ್ಟೈಲ್ ತೃತೀಯ ಸ್ಥಾನ ಕಂಚಿನ ಪದಕ ಪಡೆದಿದ್ದಾರೆ. ಅಲ್ಲದೆ ಶಾಲಾ 2 ವಿದ್ಯಾರ್ಥಿಗಳು ದಕ್ಷಿಣ ಮಧ್ಯ ಕ್ಷೇತ್ರೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯ ಶಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
























