ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳೆದ ಪತ್ತನಾಜೆಯಂದು ಶ್ರೀ ದೇವರ ಬಲಿ ಉತ್ಸವಕ್ಕೆ ವಿರಾಮ ನೀಡಲಾಗಿದ್ದು, ಇದೀಗ ದೀಪಾವಳಿ ಹಬ್ಬದಂದು ಮತ್ತೆ ಬಲಿ ಉತ್ಸವ ಆರಂಭಗೊಳ್ಳಲಿದೆ.
ನ.12 ಭಾನುವಾರ ರಾತ್ರಿ 7.30 ಕ್ಕೆ ಶ್ರೀ ದೇವರ ಬಲಿ ಹೊರಡುವುದು, ದೀಪಾವಳಿ ಹಬ್ಬ, ನ.13 ರಂದು ಸಂಜೆ 5 ಕ್ಕೆ ಸಾಮೂಹಿಕ ಗೋಪೂಜೆ ನಡೆಯಲಿರುವುದು. ಗೋಪೂಜೆ ಮಾಡಿಸುವವರಿಗೆ ಅವಕಾಶವಿದ್ದು, ಪೂಜೆ ಮಾಡಿಸುವವರು ಸಂಜೆ 4.30 ಕ್ಕೆ ಗೋಶಾಲೆಯಲ್ಲಿ ಸಂಕಲ್ಪ ಮಾಡಿಸಿ ಪೂಜೆಯಲ್ಲಿ ಭಾಗವಹಿಸಬಹುದು.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಬೇಕೆಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
























