ಪುತ್ತೂರು : ವಿಶ್ವ ಹಿಂದೂ ಪರಿಷತ್ ಮತ್ತು ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ವತಿಯಿಂದ ವಿಶ್ವ ಹಿಂದೂ ಪರಿಷದ್ ನ ಸ್ಥಾಪನಾ ದಿನಾಚರಣೆ ಅಂಗವಾಗಿ ಪುತ್ತೂರು ಮೊಸರು ಕುಡಿಕೆ ಉತ್ಸವ ಹಾಗೂ ವೈಭವದ ಶೋಭಾಯಾತ್ರೆಗೆ ಶನಿವಾರ ಸಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಚಾಲನೆ ನೀಡಲಾಯಿತು.
ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದ ಬಳಿ ವೈದ್ಯ ಡಾ.ಎಂ.ಕೆ.ಪ್ರಸಾದ್ ಚಾಲನೆ ನೀಡಿದರು.
ನಗರದ ಪ್ರಮುಖ ಕಡೆಗಳಲ್ಲಿ ಅಟ್ಟಿ ಮಡಿಕೆಗಳನ್ನು ಅಳವಡಿಸಲಾಗಿದ್ದು, ವೀರ ಹಿಂದೂ ಯುವಕರಿಂದ ಅಟ್ಟಿ ಮಡಿಕೆ ಒಡೆಯುವ ಸಾಹಸ ಪ್ರದರ್ಶನ ಹಾಗೂ ಶೋಭಾಯಾತ್ರೆ ವಿಜೃಂಭಣೆಯಿಂದ ನಡೆಯಿತು. ಬಾಲಕೃಷ್ಣನ ವೇಷ ಧರಿಸಿದ ವೈಭವ್ ಸಾಂಕೇತಿಕವಾಗಿ ಮೊಸರು ಕುಡಿಕೆ ಒಡೆದರು. ಶ್ರೀ ಕೃಷ್ಣನ ರಥದಲ್ಲಿ ಅನಿಕ್ ಲಕ್ಷ್ಮೀ ಕೃಷ್ಣನಾಗಿ, ಲಕ್ಷ್ಮೀ ಅಹನ್ ಅರ್ಜುನನಾಗಿ ಸಹಕರಿಸಿದರು.
ಶೋಭಾಯಾತ್ರೆಯಲ್ಲಿ ಸಂಘಟನೆಯ ಪ್ರಮುಖರು, ಸದಸ್ಯರು, ಪದಾಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡರು.
























