SSLC ಮರುಮೌಲ್ಯಮಾಪನದಲ್ಲಿ 7 ಹೆಚ್ಚುವರಿ ಅಂಕ | 615 ಅಂಕ ಪಡೆದುಕೊಂಡ ಶ್ರಾವ್ಯ ಕೆ.ಎಚ್. ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಗೆ ದ್ವಿತೀಯ

ಪುತ್ತೂರು: SSLC  ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಆಂಗ್ಲ ಮಾಧ್ಯಮ ವಿಭಾಗದ ಶ್ರಾವ್ಯ ಕೆ.ಎಚ್. 615 ಅಂಕ ಪಡೆದುಕೊಂಡಿದ್ದಾರೆ.

ಈ ಹಿಂದೆ 608 ಅಂಕ ಪಡೆದಿದ್ದ ಶ್ರಾವ್ಯ ಕೆ.ಎಚ್. ಅವರು ಮರುಮೌಲ್ಯಮಾಪನದಲ್ಲಿ 7 ಹೆಚ್ಚುವರಿ ಅಂಕ ಪಡೆದುಕೊಂಡಿದ್ದಾರೆ. ಇದೀಗ ಒಟ್ಟು 615 ಅಂಕ ಪಡೆದುಕೊಳ್ಳುವ ಮೂಲಕ, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಗೆ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ ಎಂದು ಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ ತಿಳಿಸಿದ್ದಾರೆ.

ಇವರು ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಹುದೇರಿ ಕುಶಾಲಪ್ಪ ಗೌಡ ಮತ್ತು ಸುಜಿತ ಕೆ. ದಂಪತಿ ಪುತ್ರಿ.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top