ಪುತ್ತೂರು: ಮಣಿಪುರ ರಾಜ್ಯದಲ್ಲಿ ಮೀಸಲಾತಿ ಹೆಸರಿನಲ್ಲಿ ಗಲಭೆ ಸೃಷ್ಟಿಸಿ ಚರ್ಚ್ ಹಾಗೂ ಕ್ರಿಶ್ಚಿಯನ್ನರ ಮೇಲಾಗುತ್ತಿರುವ ವ್ಯಾಪಕ ದಾಳಿಯನ್ನು ಖಂಡಿಸಿ, ಮಣಿಪುರದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಒತ್ತಾಯಿಸಿ ತಾಲೂಕು ಸಿಐಟಿಯು ವತಿಯಿಂದ ಪ್ರತಿಭಟನೆ ಮಂಗಳವಾರ ತಾಲೂಕು ಆಡಳಿತ ಸೌಧದ ಎದುರು ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಸಿಐಟಿಯು ಮುಖಂಡ, ನ್ಯಾಯವಾದಿ ಬಿ.ಎಂ.ಭಟ್ ಮಾತನಾಡಿ, ಮೀಸಲಾತಿ ಹೆಸರಲ್ಲಿ ಧರ್ಮಗಳ ಮಧ್ಯೆ ಮೈಮನಸ್ಸು ಹುಟ್ಟಿಸಿ ಸಮಾಜದಲ್ಲಿ ಶಾಂತಿ ಕದಡುವುದತ್ತಿರುವುದು ಖಂಡನೀಯವಾಗಿದ್ದು, ಅಲ್ಲಿಯ ಕರ್ಪ್ಯೂ ಹೇರುವ ಮೂಲಕ ಜನತೆಯನ್ನು ಗೃಹಬಂಧನದಲ್ಲಿರಿಸುವಂತೆ ಮಾಡಿದೆ. ಕಳೆದ ಕೊರೋನಾ ಸಂದರ್ಭದಲ್ಲೂ ಆದ ಅನುಭವ ಈಗ ಅಲ್ಲಿ ಆಗಿದೆ ಎಂದ ಅವರು ಪುತ್ತೂರಿನಲ್ಲಿ ನಿಜವಾಗಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರೆ. ಶಾಸಕರು ಪುತ್ತೂರಿನಲ್ಲಿ ಇಂತಹಾ ಗಲಭೆಗಳಿಗೆ ಅವಕಾಶ ನೀಡಬಾರದು. ಕೋಮುವಾದವನ್ನು ಮಟ್ಟಹಾಕಬೇಕಾಗಿದೆ. ಬಿಜೆಪಿಯಲ್ಲಿರುವ ಅಂಧಭಕ್ತ ಕತ್ತೆಗಳ ತರ ವರ್ತಿಸದೆ ಬಿಜೆಪಿ ಮುಕ್ತ ಮನೋಸ್ಥಿತಿಯಿಂದ ಸಂವಿಧಾನದ ಬಗ್ಗೆ ಒಳ್ಳೆಯ ಭಾವನೆ ಮೂಡುವ ಪರಿಸ್ಥಿತಿ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡ, ನ್ಯಾಯವಾದಿ ಪಿ.ಕೆ.ಸತೀಶನ್, ಗುಡ್ಡಪ್ಪ ಗೌಡ, ವೆಂಕಟ್ರಮಣ ಗೌಡ ಮತ್ತಿತರರು ಪಾಲ್ಗೊಂಡಿದ್ದರು. ಮಹಿಳಾ ನಾಯಕಿ ಈಶ್ವರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
























