ಪುತ್ತೂರು: ಮಹಿಳೆಯೊಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಮನೆಯ ಸಮೀಪದ ಶೆಡ್ನಲ್ಲಿ ಪತ್ತೆಯಾದ ಘಟನೆ ಮುಳ್ಳೇರಿಯಾದ ಪಳ್ಳಪ್ಪಾಡಿಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಸೆರೆನಾ (27) ಎಂದು ಗುರುತಿಸಲಾಗಿದೆ. ಪಳ್ಳಪ್ಪಾಡಿಯ ಜೈನುದ್ದೀನ್ ಎಂಬವರಿಗೆ ಆಕೆಯನ್ನು ನಾಲ್ಕು ವರ್ಷಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ಆಕೆಗೆ ಮಕ್ಕಳಾಗದ ಕಾರಣ ಗಂಡನ ಮನೆಯವರು ಮಾನಸಿಕ, ದೈಹಿಕ ಕಿರುಕುಳ ನೀಡಲಾರಂಭಿಸಿದ್ದರು ಎಂದು ಹೇಳಲಾಗುತ್ತಿದೆ. ಅತ್ತೆಯ ಕಿರುಕುಳ ತಾಳಲಾರದೆ ಸಾಕಷ್ಟು ಬಾರಿ ಆಕೆ ತವರಿಗೆ ಬಂದು ನೆಲೆಸುತ್ತಿದ್ದರು. ಸಂಬಂಧಿಕರು ಸಂಧಾನ ನಡೆಸಿ ಪತಿಯ ಮನೆಗೆ ಮತ್ತೆ ಹೋಗಿದ್ದರಾದರೂ ಕಿರುಕುಳ ಮತ್ತೆ ಮುಂದುವರಿದಿತ್ತು.
ಮೃತರ ಸಹೋದರ ಅಬ್ದುಲ್ ರೆಹಮಾನ್ ಈ ಸಾವಿನ ಬಗ್ಗೆ ಅವಮಾನ ವ್ಯಕ್ತಪಡಿಸಿದ್ದಾರೆ. ಆಕೆಗೆ ಪತಿಯ ಮನೆಯಲ್ಲಿ ಕಿರುಕುಳ ನಡೆದಾಗೆಲ್ಲಾ ಪಳ್ಳಪ್ಪಾಡಿಯ ಮನೆಗೆ ಹೋಗಿ ಸಮಾಧಾನಿಸಿ ಬರುತ್ತಿದ್ದೆ. ಈಗ ಆಕೆ ನೇಣು ಹಾಕಿದ್ದಾಗಿ ಅತ್ತೆ ಮಾವ ಕರೆ ಮಾಡಿ ತಿಳಿಸಿದ್ದು, ಈ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಅವರು ಒತ್ತಾಯುಸಿದ್ದಾರೆ.
























