ಮರದ ಗೆಲ್ಲು ಕಡಿಯುವ ‌ವಿಷಯಕ್ಕೆ ಗಲಾಟೆ: ದೂರು ದಾಖಲು

ಬಂಟ್ವಾಳ: ಮರದ ಗೆಲ್ಲು ಕಡಿಯುವ ‌ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿದ್ದು, ದೂರು ದಾಖಲಾಗಿರುವ ಘಟನೆ ಸಮೀಪ ನಡು ಗ್ರಾಮದಲ್ಲಿ ನಡೆದಿದೆ.

ಸುರೇಶ್ ರೈ ಎಂಬವರ ತಾಯಿಯ ಮನೆಗೆ ಸೋಮನಾಥ ಭಂಡಾರಿ ಎಂಬವರು ನೋಡಿಕೊಳ್ಳುತ್ತಿದ್ದ ಮರದ ಕೊಂಬೆ ತಾಗುತ್ತಿತ್ತು. ಇದನ್ನು ಕಡಿಯುವಂತೆ ಹಲವು ಬಾರಿ ಸೂಚಿಸಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆ ಸುರೇಶ್ ಅವರೇ ಕಡಿಸಲು ಮುಂದಾಗಿದ್ದಾರೆ.

ಈ ಸಂದರ್ಭದಲ್ಲಿ ಸೋಮನಾಥ್ ಅವರು ಸ್ಥಳಕ್ಕೆ ಬಂದು ಸುರೇಶ್ ಅವರಿಗೆ ಕಲ್ಲು, ತೆಂಗಿನಕಾಯಿ‌ಗಳನ್ನು ಎಸೆದು ಹಲ್ಲೆ ನಡೆಸಿದ್ದಾರೆ.ಹಾಗೆಯೇ ಮದ್ಯೆ ಬಂದ ಸುರೇಶ್ ಅವರ ಪತ್ನಿಗೂ ಅವಾಚ್ಯವಾಗಿ ನಿಂದಿಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಸುರೇಶ್ ರೈ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.





















































 
 

ಸೋಮನಾಥ್ ಅವರು ಪ್ರತಿ ದೂರು ನೀಡಿದ್ದು, ಸುರೇಶ್ ಮತ್ತು ಅವರ ಪತ್ನಿಯೇ ತನ್ನ ಮೇಲೆ ಹಲ್ಲೆ ನಡೆಸಿದ್ದಾಗಿ ತಿಳಿಸಿದ್ದಾರೆ.

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top