ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಕಾಮೆಂಟ್: ದೂರು ದಾಖಲು

ಪುತ್ತೂರು: ಸಾಮಾಜಿಕ ಜಾಲತಾಣ ಇನ್ ಸ್ ಟೀ ಗ್ರಾಂ ‌ಗೆ ಅಪ್‌ಲೋಡ್ ಮಾಡಿದ ಫೋಟೋಗೆ ಮಾನ ಹಾನಿಕರ ಕಾಮೆಂಟ್ ಹಾಕಲಾಗಿದೆ ಎಂದು ಆರೋಪಿಸಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಯ್ಯರು ಗ್ರಾಮದ ಮಾಡಾವು ಬಾಲ್ತಿಕುಮೇರು ನಿವಾಸಿ ಅನಿವಾಶ್ ಬಿ.ಡಿ. ಮತ್ತು ಮೇಘಾ ಸಿ.ಕೆ. ದಂಪತಿಯ ಫೋಟೋ ಅವರ ಮೇಘಾ ಸಿ.ಕೆ ತನ್ನ ಇನ್‌ಸ್ಟಾಗ್ರಾಮ್ ಖಾತೆಗೆ ಅಪ್‌ಲೋಡ್ ಮಾಡಿದ್ದಾರೆ. ಇದಕ್ಕೆ ಮಾನಹಾನಿಕರ ‌ಕಾಮೆಂಟ್ ಹಾಕಿರುವುದಾಗಿ ದೂರು ದಾಖಲಾಗಿರುವುದಾಗಿದೆ.





















































ಈ ಫೋಟೋ ಕುರಿತು ‘ದೀಕ್ಷೀಶ್ 405’ ಎಂಬ ಖಾತೆಯಿಂದ ಅವಹೇಳನಕಾರಿ ಮತ್ತು ಅಸಭ್ಯ ಉದ್ದೇಶದಿಂದ ಮಾನಹಾನಿಕಾರ ಕಮೆಂಟ್ ಬಂದಿರುವುದಾಗಿ ಮೇಘ ಸಿ.ಕೆ. ಅವರು ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

 
 
error: Content is protected !!
Scroll to Top