ಮಂಗಳೂರು : ಧರೆ ಕುಸಿದು ಕಾಂಟ್ರಾಕ್ಟರ್‌ ಸಾವು

ಕುಸಿವ ಭೀತಿಯಲ್ಲಿದ್ದ ಧರೆಗೆ ತಡೆಗೋಡೆ ನಿರ್ಮಿಸುವಾಗ ಸಂಭವಿಸಿದ ದುರಂತ

ಮಂಗಳೂರು: ನಗರದಲ್ಲಿ ಮಳೆಗಾಲಕ್ಕೂ ಮೊದಲೇ ಭೂಕುಸಿತ ಘಟನೆ ಸಂಭವಿಸಿದೆ. ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯ ಕುಂಟಿಕಾನ ಸಮೀಪದ ಲೋಹಿತ್ ನಗರದಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದ ಧರೆ ಜರಿತ ದುರಂತದಲ್ಲಿ ಕಂಟ್ರಾಕ್ಟರ್ ಒಬ್ಬರು ಮೃತಪಟ್ಟಿದ್ದಾರೆ.

ಮೃತರನ್ನು ಉರ್ವ ಅಶೋಕನಗರ ನಿವಾಸಿ ಆಂಟನಿ ಮಸ್ಕರೇನಸ್ (65) ಎಂದು ಗುರುತಿಸಲಾಗಿದೆ. ಮೇ 21ರಂದು ಸುಮಾರು ಮಧ್ಯಾಹ್ನ ವೇಳೆಗೆ ಮನೆಯೊಂದರ ಹಿಂಭಾಗದಲ್ಲಿ ಆವರಣ ಗೋಡೆ ನಿರ್ಮಾಣಕ್ಕೆ ಅಳತೆ ಮಾಡುವ ಕಾರ್ಯ ನಡೆಯುತ್ತಿತ್ತು. ಮಳೆಗಾಲದಲ್ಲಿ ಧರೆ ಜರಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಆವರಣ ಗೋಡೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು ಎನ್ನಲಾಗಿದೆ.





















































 
 

ಗುತ್ತಿಗೆ ವಹಿಸಿಕೊಂಡಿದ್ದ ಆಂಟನಿ ಮಸ್ಕರೇನಸ್ ಇತರ ನಾಲ್ವರು ಕಾರ್ಮಿಕರೊಂದಿಗೆ ಸ್ಥಳಕ್ಕೆ ತೆರಳಿ ಅಳತೆ ಮಾಡುತ್ತಿರುವಾಗ ಏಕಾಏಕಿ ಧರೆ ಜರಿದು ಮಣ್ಣು ಅವರ ಮೇಲೆಗೆ ಬಿದ್ದಿದೆ. ತಕ್ಷಣ ಸ್ಥಳೀಯರು ಹಾಗೂ ಸಿಬ್ಬಂದಿಗಳು ಮಣ್ಣು ತೆರವುಗೊಳಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಜೊತೆಗಿದ್ದ ಕಾರ್ಮಿಕರು ಓಡಿ ಸ್ವಲ್ಪದರಲ್ಲೇ ಪಾರಾಗಿದ್ದಾರೆ.

ಘಟನಾ ಸ್ಥಳಕ್ಕೆ ಕದ್ರಿ ಅಗ್ನಿಶಾಮಕ ಠಾಣೆ ಸಿಬ್ಬಂದಿಗಳು ಭೇಟಿ ನೀಡಿ ಮಣ್ಣು ತೆರವು ಕಾರ್ಯಾಚರಣೆ ನಡೆಸಿದರು. ಈ ಸಂಬಂಧ ಕಾವೂರು ಪೊಲೀಸ್ ಠಾಣೆ ಯಲ್ಲಿ ಯುಡಿಆರ್ ಪ್ರಕರಣ ದಾಖಲು ಪ್ರಕ್ರಿಯೆ ನಡೆಯುತ್ತಿದೆ.

error: Content is protected !!
Scroll to Top