ಅಜ್ಜಿ ಮನೆಯಲ್ಲಿದ್ದ ಯುವತಿಗೆ ‌ಕುಡುಕ ಮಾವನಿಂದ ಹಲ್ಲೆ: ಪ್ರಕರಣ ದಾಖಲು

ಕಡಬ: ತನ್ನ ಅಜ್ಜಿ ಮನೆಯಲ್ಲಿ ವಾಸವಿದ್ದ ಯುವತಿಯೊಬ್ಬಳ ಮೇಲೆ ಮದ್ಯದ ಅಮಲಿನಲ್ಲಿದ್ದ ಮಾವ‌ಅವಾಚ್ಯ ಶಬ್ದಗಳಿಂದ ನಿಂದಿಸಿ, ಹೊಟ್ಟೆಗೆ ಒದ್ದು ಹಲ್ಲೆ ನಡೆಸಿ ವಿಕೃತಿ ಮೆರೆದ ಘಟನೆ ಕೊಡಿಂಬಾಳದ ಬಳ್ಳಿಕಜೆ ಎಂಬಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಆರೋಪಿ ಬಿಜು ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆಗೊಳಗಾದ ಯುವತಿಯನ್ನು ‌ಸೋನ್ವಿ(22) ಎಂದು ಗುರುತಿಸಲಾಗಿದೆ. ಈಕೆ ತನ್ನ ತಾಯಿಯ ಮರಣದ ನಂತರ ತನ್ನ ಅಜ್ಜಿಯ ಜೊತೆಗೆ ಅವರ ಮನೆಯಲ್ಲಿ ವಾಸವಿದ್ದಳು. ಆರೋಪಿ ಬಿಜು ಬೆಳ್ತಂಗಡಿಯ ಕಡಿರುದ್ಯಾವರ ನಿವಾಸಿಯಾಗಿದ್ದು ಕಳೆದ ಒಂದು ವರ್ಷದಿಂದ ಮರಿಯಮ್ಮ ಅವರ ಮನೆಯಲ್ಲೇ ಇದ್ದುದಾಗಿ ತಿಳಿದು ಬಂದಿದೆ.





















































 
 

ಪ್ರತಿನಿತ್ಯ ಕುಡಿದು ಬರುತ್ತಿದ್ದ ಬಿಜು ಅಜ್ಜಿ ಮತ್ತು ಮೊಮ್ಮಗಳಿಗೆ ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದ. ಈ ಬಗ್ಗೆ ಮರುಯಮ್ಮ ಅವರು ಈ ಹಿಂದೆಯೂ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಬುದ್ದಿ ಮಾತು ಹೇಳಿದ್ದರೂ ಬಿಜು ಮಾತ್ರ ತನ್ನ ಹಳೆಯ ಚಾಳಿ ಬಿಟ್ಟಿರಲಿಲ್ಲ. ಅಜ್ಜಿ ಮನೆಯಲ್ಲಿ ಸೋನ್ವಿ ಇರುವುದೇ ಹಲ್ಲೆ ನಡೆಸುವುದಕ್ಕೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ.

ಗಾಯಾಳು ಸೋನ್ವಿ ಅವರನ್ನು ಮರಿಯಮ್ಮ ಮತ್ತು ನೆರೆ ಮನೆಯವರು ಸೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

error: Content is protected !!
Scroll to Top