ಯುವ ಕಾಂಗ್ರೆಸ್‌ ಪದಾಧಿಕಾರಿಗಳ ದಿಢೀರ್‌ ವಜಾ

​ಕರ್ತವ್ಯ ಲೋಪದ ಕಾರಣಕ್ಕೆ ವಜಾ ಮಾಡಿದ ಹೈಕಮಾಂಡ್‌

ಬೆಂಗಳೂರು : ಕರ್ನಾಟಕ ಯುವ ಕಾಂಗ್ರೆಸ್‌ನ 15 ಪದಾಧಿಕಾರಿಗಳನ್ನು ಏಕಾಏಕಿ ವಜಾ ಮಾಡಲಾಗಿದೆ. ರಾಜ್ಯ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಹಾಗೂ ಎಂಟು ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಹಲವರ ಮೇಲೆ ಶಿಸ್ತುಕ್ರಮ ಜರುಗಿಸಲಾಗಿದೆ. ಸಂಘಟನಾ ಚಟುವಟಿಕೆಗಳಲ್ಲಿ ಭಾಗವಹಿಸದ ಮತ್ತು ಕರ್ತವ್ಯ ಲೋಪವೆಸಗಿದ ಹಿನ್ನೆಲೆಯಲ್ಲಿ ಹೈಕಮಾಂಡ್ ಈ ಕಠಿಣ ನಿರ್ಧಾರ ಕೈಗೊಂಡಿದೆ. ​ಕರ್ತವ್ಯ ಲೋಪ ಹಾಗೂ ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ನಿಷ್ಕ್ರಿಯರಾಗಿದ್ದ ಕಾರಣಕ್ಕಾಗಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅವರ ಜವಾಬ್ದಾರಿಗಳಿಂದ ತಾತ್ಕಾಲಿಕವಾಗಿ ಮುಕ್ತಗೊಳಿಸಿ ಭಾರತೀಯ ಯುವ ಕಾಂಗ್ರೆಸ್ ಆದೇಶ ಹೊರಡಿಸಿದೆ.

ಯುವ ಕಾಂಗ್ರೆಸ್ ಪದಾಧಿಕಾರಿಗಳು ಸಂಘಟನೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು, ನಾಯಕತ್ವ ಗುಣ ಪ್ರದರ್ಶಿಸಬೇಕು ಮತ್ತು ಸಭೆಗಳಿಗೆ ಕಡ್ಡಾಯ ಹಾಜರಾಗಬೇಕು ಎಂಬ ನಿಯಮವಿದೆ. ಆದರೆ ಈ 15 ಪದಾಧಿಕಾರಿಗಳು ಕಳೆದ ಕೆಲವು ಸಮಯದಿಂದ ಸಂಘಟನಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿಲ್ಲ ಮತ್ತು ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸುತ್ತಿಲ್ಲ ಎಂಬುದು ಪರಿಶೀಲನೆಯಲ್ಲಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸಂಘಟನೆಯ ಹಿತದೃಷ್ಟಿಯಿಂದ ಹೈಕಮಾಂಡ್ ಈ ದಿಟ್ಟ ಕ್ರಮ ಕೈಗೊಂಡಿದೆ.





















































 
 

ಮೇ 13ರಂದು ಭಾರತೀಯ ಯುವ ಕಾಂಗ್ರೆಸ್ ನೀಡಿರುವ ಅಧಿಕೃತ ನೋಟಿಸ್‌ನಲ್ಲಿ ಅತ್ಯಂತ ಕಠಿಣ ಸಂದೇಶವನ್ನು ರವಾನಿಸಲಾಗಿದೆ. ಈ ಪತ್ರದ ಮೂಲಕ ಔಪಚಾರಿಕವಾಗಿ ನಿಮಗೆ ಸೂಚನೆ ನೀಡಲಾಗುತ್ತಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಮ್ಮನ್ನು ಅಮಾನತಿನಲ್ಲಿಡಲಾಗಿದೆ. ಅಲ್ಲದೆ, KPYCC ಅಡಿಯಲ್ಲಿ ನಿಮ್ಮ ಕರ್ತವ್ಯಗಳು ಮತ್ತು ಜವಾಬ್ದಾರಿಗಳಿಂದ ನಿಮ್ಮನ್ನು ತಾತ್ಕಾಲಿಕವಾಗಿ ಮುಕ್ತಗೊಳಿಸಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ವಜಾಗೊಂಡ ಪದಾಧಿಕಾರಿಗಳು: ರಾಜ್ಯ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಎಸ್. ಫ್ರಾನ್ಸಿಸ್ ಬೆನಿಟೊ, ಬಿಂದು ಗೌಡ, ಸುಮನ್ ಸೋಮಶೇಖರ್, ಅಫ್ನಾನ ಖಾನಂ, ಲಕ್ಷ್ಮಿ ಕೆ, ವಾಣಿ ಕಾಂಬ್ಳೆ, ದಕ್ಷಿಣಮೂರ್ತಿ ಎಸ್, ರಾಜ್ಯ ಕಾರ್ಯದರ್ಶಿಗಳಾದ ಅಬ್ದುಲ್ ರವೂಫ್ ಬಿ.ಎಂ., ಸೈಯದ್ ಹುಸೇನ್ ಖಾದ್ರಿ, ಮೊಹಮ್ಮದ್ ಆಸಿಫ್ ಹುಸೇನ್, ಎಸ್.ಆರ್.ಎಸ್ ಚಂದ್ ಬಾಷಾ, ಗೋವರ್ಧನ್ ಜಿ.ಸಿ., ಪವನ್ ಸಾಲಿಯಾನ್ ಮತ್ತು ನವೀನ್ ಕುಮಾರ್ ಎಸ್. ವಜಾಗೊಂಡಿದ್ದಾರೆ.

error: Content is protected !!
Scroll to Top