ಬೆಳ್ತಂಗಡಿ : ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮಹಿಳೆಯೊಬ್ಬರು ದುರ್ಮರಣ ಹೊಂದಿರುವ ಘಟನೆ ಬೆಳ್ತಂಗಡಿ ತಾಲೂಕಿನ ಪಡಂಗಡಿಯ ಕನ್ನಡಿಕಟ್ಟೆ ಬಳಿ ಭಾನುವಾರ ರಾತ್ರಿ ನಡೆದಿದೆ. ಬಳಂಜದ ಪ್ರಸಿದ್ಧ ಅನಿಲ್ ಫಾರ್ಮ್ನ ಅನಿಲ್ ಭಟ್ ಅವರ ಪತ್ನಿ ಶೈಲಜಾ (35) ಅಪಘಾತದಲ್ಲಿ ಸಾವೀಗೀಡಾದ ಮಹಿಳೆ.
ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದ ಬಳಂಜ ಫಾರ್ಮ್ನ ಮಾಲಕ ಪ್ರಗತಿಪರ ಕೃಷಿಕ ಅನಿಲ್ ಭಟ್ (45) ಅವರ ಪತ್ನಿ ಶೈಲಜಾ (35) ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದು, ಅನಿಲ್ ಭಟ್ ಅವರು ಗಾಯಗೊಂಡಿದ್ದಾರೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಪುತ್ರ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಅನಿಲ್ ಭಟ್ ಮತ್ತು ಮತ್ತು ಪತ್ನಿ ಶೈಲಜಾ ಅವರು ತಮ್ಮ ಫಾರ್ಮ್ನ ಕೆಲಸ ಮುಗಿಸಿ ಅವರ ಸೈಟ್ಗೆ ಬೈಕ್ನಲ್ಲಿ ತೆರಳುತ್ತಿದ್ದಾಗ ಕನ್ನಡಿಕಟ್ಟೆ ಬಳಿ ಬೈಕ್ ಮತ್ತು ಕಾರು ನಡುವೆ ಢಿಕ್ಕಿ ಸಂಭವಿಸಿದೆ. ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೋಲಿಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
























