ನಕಲಿ ದಾಖಲೆ ಬಳಸಿ ಪಾಸ್‌ಪೋರ್ಟ್‌ ಸೃಷ್ಟಿ : ಕೇಸ್‌ ದಾಖಲು

ಮಹಿಳೆಗೆ ಗೊತ್ತಿಲ್ಲದಂತೆ ಅವರ ಹೆಸರಿನಲ್ಲಿ ಪಾಸ್‌ಪೋರ್ಟ್‌ ಪಡೆದು ವಿದೇಶಕ್ಕೆ ಪ್ರಯಾಣ

ಮಂಗಳೂರು : ಬೇರೊಬ್ಬರ ಗುರುತಿನ ದಾಖಲೆ ಪತ್ರಗಳನ್ನು ದುರುಪಯೋಗಪಡಿಸಿ ನಕಲಿ ಪಾಸ್‌ಪೋರ್ಟ್‌ ರಚಿಸಿ ವಂಚನೆಗೈದ ಸಂಬಂಧ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ. ಉಳ್ಳಾಲ ನಿವಾಸಿ ಪ್ರೀತಾ ಡಿ.ಸೋಜ, ಪ್ರೇಮ್‌ ಡಿ.ಸೋಜ ಹಾಗೂ ಯಶೋದಾ ಕೇಶವ ಸೇರಿದಂತೆ ಹಲವರ ವಿರುದ್ಧ ಗಂಭೀರ ಆರೋಪಗಳಡಿ ಸಿಎಸ್‌ಬಿ ಪೊಲೀಸರು ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದಾರೆ.

ಉಳ್ಳಾಲ ನಿವಾಸಿ ಯಶೋದಾ ಕೇಶವ ಎಂಬ ಮಹಿಳೆಯ ಹೆಸರಿನಲ್ಲಿ ಅನ್ಯ ಮಹಿಳೆಯೊಬ್ಬರು ಪಾಸ್‌ಪೋರ್ಟ್‌ ಪಡೆದು ವಿದೇಶಕ್ಕೆ ಪ್ರಯಾಣಿಸಿರುವ ಬಗ್ಗೆ ಪೋಲೀಸರಿಗೆ ಗೌಪ್ಯ ಮಾಹಿತಿ ಲಭಿಸಿತ್ತು. ಈ ಮಾಹಿತಿ ಆಧರಿಸಿ ಸಿಎಸ್‌ಬಿ ಪೊಲೀಸರು ತನಿಖೆ ಆರಂಭಿಸಿದಾಗ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಪೊಲೀಸರ ಪರಿಶೀಲನೆಯ ವೇಳೆ ಪಾಸ್‌ಪೋರ್ಟ್‌ನಲ್ಲಿ ಹೆಸರು ಹಾಗೂ ವಿಳಾಸ ಯಶೋದಾ ಕೇಶವ ಅವರದ್ದಾಗಿದ್ದರೂ, ಅದರಲ್ಲಿ ಬಳಸಲಾಗಿದ್ದ ಭಾವಚಿತ್ರ ಮಾತ್ರ ಪ್ರೀತಾ ಡಿ. ಸೋಜ ಎಂಬಾಕೆಯದ್ದು ಎಂಬುದು ತಿಳಿದು ಬಂದಿದೆ.





















































 
 

ಪ್ರೀತಾ ಡಿಸೋಜ ಅವರನ್ನು ಅಕ್ರಮವಾಗಿ ಇಸ್ರೇಲ್‌ಗೆ ಕಳುಹಿಸುವ ಉದ್ದೇಶದಿಂದ ಈ ಸಂಪೂರ್ಣ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ. ಈ ಕೃತ್ಯದ ಪ್ರಮುಖ ಸೂತ್ರಧಾರ ಉಳ್ಳಾಲ ನಿವಾಸಿಯಾಗಿದ್ದು, ಈತನ ನಕಲಿ ದಾಖಲೆಗಳನ್ನು ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾನೆ. ಯಶೋದಾರ ಶೈಕ್ಷಣಿಕ ದಾಖಲೆ, ವಿಳಾಸದ ಪುರಾವೆ ಹಾಗೂ ಇತರ ಅಧಿಕೃತ ದಾಖಲೆಗಳನ್ನು ಬಳಸಿಕೊಂಡು, ಪ್ರೀತಾ ಡಿ ಸೋಜ ಹೆಸರಲ್ಲಿ ಪಾಸ್‌ಪೋರ್ಟ್‌ ಮಾಡಿಸಿ ಅಧಿಕಾರಿಗಳನ್ನು ದಾರಿ ತಪ್ಪಿಸಲಾಗಿದೆ.

ಅಕ್ರಮ ಪಾಸ್‌ಪೋರ್ಟ್ ಬಳಸಿ ಪ್ರೀತಾ ಡಿಸೋಜ ಮಾರ್ಚ್‌17ರಂದು ಮುಂಬೈ ವಿಮಾನ ನಿಲ್ದಾಣದ ಮೂಲಕ ಅಕ್ರಮವಾಗಿ ವಿದೇಶಕ್ಕೆ ತೆರಳಿರುವುದು ಕಂಡುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಸ್‌ಬಿ ಪೊಲೀಸ್‌ ರಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

error: Content is protected !!
Scroll to Top