ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ರದ್ದಾಗಿರುವ ನೀಟ್ ಪರೀಕ್ಷೆ
ನವದೆಹಲಿ: ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ರದ್ದಾಗಿರುವ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಶುಕ್ರವಾರ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ – ಪದವಿಪೂರ್ವ (NEET UG) 2026ರ ಮರುಪರೀಕ್ಷೆಯನ್ನು ಜೂನ್ 21ರಂದು ನಡೆಸುವುದಾಗಿ ಘೋಷಿಸಿದೆ.
NTAಯ ಅಧಿಕೃತ ‘ಎಕ್ಸ್’ (X) ಖಾತೆಯ ಮೂಲಕ ಈ ಪ್ರಕಟಣೆ ಹೊರಡಿಸಲಾಗಿದೆ. ಭಾರತ ಸರ್ಕಾರದ ಅನುಮೋದನೆಯೊಂದಿಗೆ ಜೂನ್ 21ರಂದು NEET-UG 2026 ಮರುಪರೀಕ್ಷೆಯನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಏಜೆನ್ಸಿ ತಿಳಿಸಿದೆ.
“ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಜೂನ್ 21, 2026ರ ಭಾನುವಾರದಂದು NEET (UG) 2026 ರ ಮರುಪರೀಕ್ಷೆಯನ್ನು ನಡೆಸಲು ನಿರ್ಧರಿಸಿದೆ,” ಎಂದು ಏಜೆನ್ಸಿ ತನ್ನ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ತಿಳಿಸಿದೆ.
ಪರೀಕ್ಷೆಗೆ ಸಂಬಂಧಿಸಿದ ಅಧಿಕೃತ ಅಪ್‌ಡೇಟ್‌ಗಳು ಮತ್ತು ಮಾಹಿತಿಗಾಗಿ ಅಭ್ಯರ್ಥಿಗಳು ಮತ್ತು ಪೋಷಕರು ಕೇವಲ ಅಧಿಕೃತ ಸಂವಹನ ಮಾಧ್ಯಮಗಳನ್ನು ಮಾತ್ರ ಅವಲಂಬಿಸಬೇಕೆಂದು NTA ಸಲಹೆ ನೀಡಿದೆ.
ಈ ಹಿಂದೆ ನಡೆದಿದ್ದ NEET-UG 2026 ಪರೀಕ್ಷೆಯ ರದ್ದಾಗಿ ಲಕ್ಷಾಂತರ ವೈದ್ಯಕೀಯ ಸೀಟು ಆಕಾಂಕ್ಷಿಗಳು ಪರಿಷ್ಕೃತ ವೇಳಾಪಟ್ಟಿಗಾಗಿ ಕಾಯುತ್ತಿದ್ದರು. ಇದೀಗ ಹೊಸ ದಿನಾಂಕ ಪ್ರಕಟವಾಗುವುದರೊಂದಿಗೆ ಅಭ್ಯರ್ಥಿಗಳಿಗೆ ಸ್ಪಷ್ಟತೆ ಸಿಕ್ಕಂತಾಗಿದೆ.
ಪರೀಕ್ಷೆಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿಗಾಗಿ ಅಭ್ಯರ್ಥಿಗಳು neet-ug@nta.ac.in ಇ-ಮೇಲ್ ಮೂಲಕ ಅಥವಾ ಸಹಾಯವಾಣಿ ಸಂಖ್ಯೆಗಳಾದ 011-40759000 ಮತ್ತು 011-69227700ಗೆ ಕರೆ ಮಾಡಿ ಏಜೆನ್ಸಿಯನ್ನು ಸಂಪರ್ಕಿಸಬಹುದಾಗಿದೆ.
























