ವೋಟ್‌ ಬ್ಯಾಂಕ್‌ ಖುಷಿಪಡಿಸಲು ಹಿಜಾಬ್‌ಗೆ ಅವಕಾಶ : ಅಶೋಕ್‌ ಟೀಕೆ

ಸಿದ್ದರಾಮಯ್ಯ ಸರ್ಕಾರದಿಂದ ಹಿಂದೂಗಳಿಗೆ ಅವಮಾನ ಎಂದು ಆಕ್ರೋಶ

ಬೆಂಗಳೂರು: ಶಾಲೆ-ಕಾಲೇಜುಗಳಲ್ಲಿ ಹಿಜಾಬ್‌ ಧರಿಸಲು ಅವಕಾಶ ನೀಡಿದ ರಾಜ್ಯ ಸರ್ಕಾರದ ಆದೇಶವನ್ನು ತೀವ್ರವಾಗಿ ಖಂಡಿಸಿರುವ ವಿಪಕ್ಷ ನಾಯಕ ಆರ್‌.ಅಶೋಕ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸ್ಲಿಮರಿಗೆ ಭರಪೂರ ಅವಕಾಶ ಕೊಡ್ತಾರೆ, ಹಿಂದೂಗಳನ್ನು ಕಡೆಗಣಿಸ್ತಾರೆ ಎಂದು ಲೇವಡಿ ಮಾಡಿದ್ದಾರೆ.

ಸಿದ್ದರಾಮಯ್ಯ ಅಂದರೆ ಮುಸ್ಲಿಮರಿಗೆ ಭರಪೂರ ಅವಕಾಶಗಳು. ಸಿದ್ದರಾಮಯ್ಯನವರು ಹಿಂದೂಗಳನ್ನ ಕಡೆಗಣಿಸ್ತಾರೆ, ಹಿಂದೂಗಳಿಗೆ ಅವಮಾನ ಮಾಡ್ತಾರೆ. ಜನಿವಾರ ಕಂಡರೆ ಆಗಲ್ಲ, ಬೊಟ್ಟು ಇಟ್ಟುಕೊಂಡರೆ ಆಗಲ್ಲ, ದೇವಸ್ಥಾನಕ್ಕೆ ಹೋದರೆ ಆಗಲ್ಲ. ಆದರೆ ಮುಲ್ಲಾಗಳ ಮೇಲೆ ಬಹಳ ಪ್ರೀತಿ. ನಮ್ಮ ಸರ್ಕಾರ ಇದ್ದಾಗ ಬ್ಯಾನ್ ಮಾಡಿದ್ದ ಹಿಜಾಬ್‌ ಅನ್ನು ಜಾರಿಗೆ ತಂದಿರೋದು ವೋಟ್ ಬ್ಯಾಂಕಿಗೋಸ್ಕರ ಎಂದು ಆಕ್ರೋಶ ಹೊರಹಾಕಿದ್ದಾರೆ.





















































 
 

ಇದು ಮುಸ್ಲಿಮರ ಅತಿಯಾದ ಓಲೈಕೆ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಇದೇ ತರ ಓಲೈಕೆ ಮಾಡಿ ಸೋತು ಮನೆ ಸೇರಿದ್ದಾರೆ. ಹಿಂದೂಗಳನ್ನು ಬೈದು ಸ್ಟಾಲೀನ್ ಸೋತು ಹೋದರು. ಯಾರ್ಯಾರು ಹಿಂದೂಗಳನ್ನ ಟೀಕೆ, ಅನ್ಯಾಯ ಮಾಡುತ್ತಾರೋ ಅಂಥವರನ್ನ ಇಡೀ ಹಿಂದೂ ಸಮುದಾಯ ಒಟ್ಟಿಗೆ ನಿಂತು ಬುದ್ಧಿ ಕಲಿಸುತ್ತದೆಎಂದು ಎಚ್ಚರಿಸಿದ್ದಾರೆ.

ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಎಲ್ಲ ಶಾಸಕರಿಗೆ ಹಿಂದೂಗಳು ಸರಿಯಾದ ಪಾಠ ಕಲಿಸುತ್ತಾರೆ. ಇದು ಹಿಂದೂ ವಿರೋಧಿ ಸರ್ಕಾರ, ಹಿಂದೂಗಳಿಗೆ ದ್ರೋಹ, ವಂಚನೆ ಮಾಡುತ್ತಾ ಇದ್ದಾರೆ. 800-900 ಕೋಟಿ ಅನುದಾನವನ್ನ ಮುಸ್ಲಿಮರಿಗೆ ಕೊಟ್ಟರು. ಈ ರೀತಿ ತಾರತಮ್ಯ ಮಾಡುತ್ತಿರುವ ಸಿದ್ದರಾಮಯ್ಯ ವೋಟಿಗೊಸ್ಕರ ಏನೂ ಬೇಕಾದರೂ ಮಾಡಲು ಸಿದ್ದ ಅನ್ನೋದನ್ನ ತೋರಿಸುತ್ತಾ ಇದ್ದಾರೆ ಎಂದಿದ್ದಾರೆ.

ಕೇಸರಿ ಶಾಲು ನಮ್ಮ ಧರ್ಮದ ಸಂಕೇತ, ಕರ್ನಾಟಕದ ಎಲ್ಲ ಸ್ವಾಮಿಗಳು ಕೇಸರಿ ಬಟ್ಟೆ ಹಾಕಿಕೊಳ್ಳುತ್ತಾರೆ. ಅವರಿಗೆ ಹೋಗಿ ನಮಸ್ಕಾರ ಹಾಕ್ತೀರಾ. ವೋಟ್‌ಗೆ ಬಂದಾಗ ಸ್ವಾಮಿಗಳ ಬಳಿ ಹೋಗಿ ನಮಸ್ಕಾರ ಹಾಕ್ತೀರ. ಈಗ ಮಾತ್ರ ಕೇಸರಿ ಬೇಡ, ವೋಟ್ ಬೇಕಾದಾಗ ಸುತ್ತೂರು, ಆದಿಚುಂಚನಗಿರಿ, ದಲಿತ ಮಠಕ್ಕೆ ಹೋಗ್ತೀರ. ಇದು ಹಿಂದೂಗಳ ಬೆನ್ನಿಗೆ ಚೂರಿ ಹಾಕುವಂತಹ ಸರ್ಕಾರ. ಈ ಸರ್ಕಾರ ತೊಲಗಬೇಕು. ರಾಜ್ಯದ ಜನ ಹಿಂದೂ ವಿರೋಧಿ ಸರ್ಕಾರವನ್ನ ಕಿತ್ತೊಗೆಯುತ್ತಾರೆ. ಬಿಜೆಪಿ ಎಲ್ಲಾ ಮುಖಂಡರ ಜೊತೆ ಚರ್ಚಿಸಿ, ಇದರ ವಿರುದ್ಧ ಹೋರಾಟ ಮಾಡತ್ತೇವೆ ಎಂದು ಹೇಳಿದ್ದಾರೆ.

error: Content is protected !!
Scroll to Top