ಹೆಂಡತಿ ಪರಾರಿಯಾದ ನೋವಿನಲ್ಲಿ ಮಕ್ಕಳಿಬ್ಬರನ್ನು ಕೊಂದು ಅರ್ಚಕ ಆತ್ಮಹತ್ಯೆ

ಸಾಕಿ ಬೆಳೆಸಿದ ಯುವಕನ ಜೊತೆಗೆ ಓಡಿಹೋದ ಹೆಂಡತಿ

ತುಮಕೂರು: ತಾನೇ ಸಾಕಿ ಬೆಳೆಸಿದ ಸಂಬಂಧಿಕ ಯುವಕನೊಂದಿಗೆ ತನ್ನ ಪತ್ನಿ ಪಲಾಯನ ಮಾಡಿದ ನೋವಿನಲ್ಲಿ ಅರ್ಚಕರೊಬ್ಬರು ತನ್ನ ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಂದು ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಕುಣಿಗಲ್ ತಾಲೂಕಿನ ಆಲ್ಕೆರೆ ಗ್ರಾಮದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದವರನ್ನು ಗ್ರಾಮದ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಅರ್ಚಕ ಶಿವಣ್ಣ (40) ಎಂದು ಗುರುತಿಸಲಾಗಿದೆ. ಅವರು ಮಕ್ಕಳಾದ ಜೀವನ್ (10) ಹಾಗೂ ಪ್ರಾಣೇಶ್ (5) ಕತ್ತುಹಿಸುಕಿ ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.





















































 
 

ಶಿವಣ್ಣ ತನ್ನ ಅಕ್ಕನ ಮಗ ಹೇಮಂತ್‌ ಎಂಬಾತನನ್ನು ಮನೆಯಲ್ಲಿಟ್ಟುಕೊಂಡು ಸಾಕಿದ್ದರು. ವರ ಪತ್ನಿ ಈ ಯುವಕನ ಜೊತೆಗೆ ಅನೈತಿಕ ಸಂಬಂಧ ಬೆಳೆಸಿಕೊಂಡು ಕೆಲ ದಿನಗಳ ಹಿಂದೆ ಆತನ ಜೊತೆ ಓಡಿಹೋಗಿದ್ದಾಳೆ. ಆ ನಂತರ ಶಿವಣ್ಣ ಖಿನ್ನತೆಗೆ ಜಾರಿದ್ದರು. ಕಳೆದ ರಾತ್ರಿ ಮಕ್ಕಳಿಬ್ಬರನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

error: Content is protected !!
Scroll to Top