ಬೆಳ್ತಂಗಡಿ : ಪ್ರೀತಿಸಿದ ಯುವಕನ ಜೊತೆ ಮದುವೆಯಾಗಲು ಮನೆಯವರು ಅನುಮತಿ ನೀಡಲಿಕ್ಕಿಲ್ಲ ಎಂದು ಭಾವಿಸಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಮಾಯದ ಬಾಳೆಮಂಡಿಕಲ್ಲು ನಿವಾಸಿ ದಿನೇಶ್ ನಾಯ್ಕ್ ಮತ್ತು ರೇವತಿ ದಂಪತಿ ಎರಡನೇ ಪುತ್ರಿ ರಮಾ (19) ಎಂಬಾಕೆ ಕಳೆದ ಏ.19ರಂದು ರಾತ್ರಿ ಮನೆಯಲ್ಲಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಬಳಿಕ ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತಿತ್ತು, ಆದರೆ ಚಿಕಿತ್ಸೆ ಫಲಿಸದೆ ರಮಾ ಏ.29 ರಂದು ಸಾವನ್ನಪ್ಪಿದ್ದಾಳೆ.
ರಮಾ ವಾಮದಪದವು ಕಾಲೇಜ್‌ನಲ್ಲಿ ಎರಡನೇ ವರ್ಷದ ಪದವಿ ವಿದ್ಯಾರ್ಥಿನಿಯಾಗಿದ್ದಳು. ಯುವಕನೊಬ್ಬನ ಜೊತೆ ಪ್ರೀತಿ ಮಾಡುತ್ತಿದ್ದಳು ಎನ್ನಲಾಗಿದೆ. ಈ ವಿಚಾರ ಮನೆಯವರಿಗೂ ತಿಳಿದಿತ್ತು. ಕಲಿಯುವುದು ಮುಗಿದ ನಂತರ ಮದುವೆ ಮಾಡುವುದಾಗಿ ಮನೆಯವರು ಹೇಳಿದ್ದರು. ಆದರೆ ರಮಾ ಮದುವೆ ಮಾಡಿಕೊಡಲಿಕ್ಕಿಲ್ಲ ಎಂದು ಭಾವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದ್ದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.
























