ಬೆಂಗಳೂರು: ವೇಶ್ಯಾವಾಟಿಕೆಗೆ ಪ್ರಚೋದನೆ ನೀಡುತ್ತಿದ್ದ ಆರು ಮಂದಿ ವಿದೇಶಿ ಮಹಿಳೆಯರನ್ನು ಕೋರಮಂಗಲ ಚೆಕ್ ಪೋಸ್ಟ್ ಬಳಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ರಸ್ತೆ ಬದಿಯಲ್ಲಿ ನಿಂತುಕೊಂಡು ಗಂಡಸರನ್ನು ಪ್ರಚೋದನೆ ಮಾಡುತ್ತಿದ್ದ ವಿದೇಶಿ ಮಹಿಳೆಯರ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ರೈಡ್ ನಡೆಸಿರುವುದಾಗಿದೆ.
ಈ ಪ್ರಕರಣದಲ್ಲಿ ಆರು ಮಂದಿ ವಿದೇಶಿ ಮಹಿಳೆಯರು ಪೊಲೀಸರ ವಶವಾಗಿದ್ದಾರೆ. ಪಾಸ್‌ಪೋರ್ಟ್, ವಿಸಾ ಮೊದಲಾದ ಎಲ್ಲಾ ದಾಖಲೆಗಳನ್ನು ಬಂಧಿತ ಮಹಿಳೆಯರು ಹೊಂದಿದ್ದು, ಅವರು ಇಲ್ಲಿಗೆ ಬಂದು ಯಾತಕ್ಕಾಗಿ ಇಂತಹ ಕೆಲಸಕ್ಕೆ ಇಳಿದಿದ್ದರು ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

























