ಬೆಂಗಳೂರು: ಪತಿಯ ಮನೆಯವರ ವರದಕ್ಷಿಣೆ ಕಿರುಕುಳ ಸಹಿಸಲಾರದೆ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ತಲಘಟ್ಟಪುರದಲ್ಲಿ ನಡೆದಿದೆ. ಇವರ ಒಂದೂವರೆ ವರ್ಷದ ಮಗು ತಾಯಿಯ ಸಾವಿನಿಂದ ಅನಾಥವಾಗಿದೆ.
ಮೃತರನ್ನು ತಮಿಳುನಾಡಿನ ತಿರುವಾರೂರ್ ಜಿಲ್ಲೆಯ ನೀಡಮಂಗಳಂ ನಿವಾಸಿ, ಸಾಫ್ಟ್‌ವೇರ್ ಉದ್ಯೋಗಿ ಭುವನೇಶ್ವರಿ ಎಂದು ಗುರುತಿಸಲಾಗಿದೆ.
ಭುವನೇಶ್ವರಿ ಮತ್ತು ಹರೀಶ್ ಕುಮಾರ್ ಪ್ರೀತಿಸಿ ಮದುವೆಯಾಗಿದ್ದರು. ಅದ್ಧೂರಿಯಾಗಿ ಈ ಮದುವೆಯನ್ನು ಸಹ ಭುವನೇಶ್ವರಿ ಕುಟುಂಬಸ್ಥರು ಮಾಡಿಕೊಟ್ಟಿದ್ದು, ಇದಕ್ಕಾಗಿ 25 ಲಕ್ಷ ರೂ. ವ್ಯಯಿಸಿದ್ದರು.
ಹೀಗಿದ್ದರೂ ಪತಿ, ಪತಿಯ ತಾಯಿ ಮತ್ತು ಸಹೋದರ ಭುವನೇಶ್ವರಿ ಅವರಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಇದರಿಂದ ಮಾನಸಿಕವಾಗಿ ನೊಂದಿದ್ದ ಅವರು ಜೆ.ಪಿ. ನಗರದ ಫ್ಲಾಟ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

























