ಮಂಗಳೂರು: ಕಾರಿಗೆ ಸೈಡ್ ಕೊಡುವ ವಿಷಯದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ತಂಡವೊಂದಕ್ಕೆ ಶಿಕ್ಷೆ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ FTSC – 2 ತ್ವರಿತಗತಿ ನ್ಯಾಯಾಲಯ ತೀರ್ಪು ನೀಡಿದೆ.
ಆರೋಪಿಗಳಾದ ಬಂಟ್ವಾಳದ ಕಾವಳಪಡೂರು ನಿವಾಸಿ ದಿನೇಶ್ ಶೆಟ್ಟಿ, ಅರ್ಕುಳದ ಧನರಾಜ್ ಪೂಜಾರಿ ಯಾನೆ ವಳಚ್ಚಿಲ್ ಧನು, ನವೀನ್ ಎಡಪದವು, ಪ್ರಜ್ವಲ್ ಪೂಜಾರಿ ಕಾರ್‌ಸ್ಟ್ರೀಟ್, ವಸಂತ್ ಬಾಳ ತಡಂಬೈಲ್ ಗೆ ನ್ಯಾಯಾಲಯವು 3 ವರ್ಷಗಳ ಕಠಿಣ ಶಿಕ್ಷೆ ಮತ್ತು 1.34 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ವಸಂತ್ ಬಾಳ ಮತ್ತು ದಿನೇಶ್ ಕಾರಿನಲ್ಲಿ ಹೋಗುತ್ತಿದ್ದಾಗ ಸೈಡ್ ಕೊಡುವ ವಿಚಾರಕ್ಕೆ ಸಂಬಂಧಿಸಿದ ಹಾಗೆ ಕಿಶನ್ ಎಂಬವರ ಜೊತೆಗೆ ಗಲಾಟೆ ಮಾಡಿಕೊಂಡಿದ್ದರು. ಇದೇ ದ್ವೇಷಕ್ಕೆ ಕಿಶನ್ ರಾವ್ ಅನ್ನು ಕೊಲೆ ಮಾಡಲು ಆರೋಪಿಗಳು ಸಂಚು ಮಾಡಿದ್ದರು. ಘಟನೆ ನಡೆದ ಎರಡು ದಿನಗಳ ಬಳಿಕ ಕಿಶನ್ ಬೈಕ್‌ನಲ್ಲಿ ಹೋಗುತ್ತಿದ್ದಾಗ ಕಾರಿನಲ್ಲಿ ಹಿಂಬಾಲಿಸಿದ ಆರೋಪಿಗಳು ಅವರನ್ನು ಅಡ್ಡಗಟ್ಟಿ, ಹಲ್ಲೆ ನಡೆಸಿ ಕೊಲೆ ಬೆದರಿಕೆ ಸಹ ಹಾಕಿದ್ದರು.
ಸುರತ್ಕಲ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

























