ಸೇವಾ ಮನೋಭಾವ ಹೊಂದಿರುವವರೇ ನಿಜವಾದ ಶ್ರೀಮಂತರು: ಸುಮಂತ್ ಕುಮಾರ್ ಜೈನ್

ಗೇರುಕಟ್ಟೆ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೊರಂಜ ಎಸ್. ಡಿ. ಎಂ. ಸಿ., ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಇತರ ದಾನಿಗಳ ಸಹಕಾರದಿಂದ ನಿರ್ಮಿಸಲಾದ ನೂತನ ತರಗತಿ ಕೊಠಡಿಯನ್ನು ಕಳಿಯ ಸಿ.ಎ. ಬ್ಯಾಂಕಿನ ಅಧ್ಯಕ್ಷ ವಸಂತ ಮಜಲು ಉದ್ಘಾಟಿಸಿದರು.

ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮುಖ್ಯ ಅತಿಥಿ ಗುರುವಾಯನಕೆರೆ ಎಕ್ಸೆಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಮಂತ ಕುಮಾರ್ ಜೈನ್ ಮಾತನಾಡಿ, ಹಣ, ಆಸ್ತಿ ಇದ್ದವರು ಶ್ರೀಮಂತರು ಎಂದು ಭಾವಿಸುವ ಕಾಲವೊಂದಿತ್ತು. ಆದರೆ ಸವಾಲುಗಳನ್ನು ಎದುರಿಸಿ ಸಾಧನೆಗಳನ್ನು ಮಾಡುವ ಮೂಲಕ ಸಮಾಜದ ಬಗ್ಗೆ ಕಾಳಜಿಯಿಂದ ಕಾರ್ಯ ನಿರ್ವಹಿಸುವವರೇ ನಿಜವಾದ ಶ್ರೀಮಂತರೆಂದು ತಿಳಿಸಿದರು.

ಎಸ್. ಡಿ. ಎಂ. ಸಿ. ಅಧ್ಯಕ್ಷ ಬಿ .ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.























































 
 

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಶಾಂತ್, ಸಂಸ್ಥೆಯ ಹಿರಿಯ ವಿದ್ಯಾರ್ಥಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ದಿವಾಕರ ಆಚಾರ್ಯ ಗೇರುಕಟ್ಟೆ, ಎಸ್. ಕೆ. ಡಿ. ಆರ್. ಡಿ. ಪಿ. ತಾಲೂಕು ಯೋಜನಾಧಿಕಾರಿ ಯಶೋಧರ ಕೆ., ನಾಟಿ ವೈದ್ಯ ಬಿ. ಹೆಚ್. ಆದಮ್ ಶಾಪಿ, ಹಿರಿಯ ವಿದ್ಯಾರ್ಥಿ ರಂಜನ್ ಕೆಳಗಿನ ಬೆಟ್ಟು ಶುಭ ಹಾರೈಸಿದರು.

ಶಿಕ್ಷಕಿ ದಿ. ಸುಲೋಚನಾ ಆಚಾರ್ಯ ಗೇರುಕಟ್ಟೆ ಸ್ಮರಣಾರ್ಥವಾಗಿ ಚಾಲ್ತಿಯಲ್ಲಿರುವ ದತ್ತಿನಿಧಿಗೆ ಪೂರಕವಾಗಿ ರೂಪಾಯಿ 10,000 ದತ್ತಿನಿದಿಯನ್ನು ಈ ಸಂದರ್ಭದಲ್ಲಿ ದಿವಾಕರ ಆಚಾರ್ಯ ಗೇರುಕಟ್ಟೆ ಎಸ್. ಡಿ. ಎಂ. ಸಿ. ಅಧ್ಯಕ್ಷರಿಗೆ ಹಸ್ತಾಂತರಿಸಿದರು.

ಸಾಧಕರಿಗೆ ಸನ್ಮಾನ:

ಜಾನಪದ ರಂಗಭೂಮಿ ಮತ್ತು ನಾಟಕಗಳ ಬಗ್ಗೆ ಪ್ರಬಂಧ ಮಂಡಿಸಿ, ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಗಳಿಸಿದ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಕೇಶವ ಬಂಗೇರ, ನಿವೃತ್ತಿ ಹೊಂದಿದ ಅಡುಗೆ ಸಹಾಯಕಿ ಕುಸುಮ ಬರಾಯ, ಶಾಲಾ ರಂಗಮಂದಿರಕ್ಕೆ ಕೊಡುಗೆ ನೀಡಿದ ಹಿರಿಯ ಶಿಕ್ಷಕಿ ಅನುರಾಧ ಇವರನ್ನು ಗೌರವಿಸಲಾಯಿತು. ಯಕ್ಷಗಾನದಲ್ಲಿ ಡಿಪ್ಲೋಮಾ ಪದವಿ ಪಡೆದ ದಿವಾಕರ ಆಚಾರ್ಯ ಗೇರುಕಟ್ಟೆ ಅವರ ಸಾಧನೆಗೆ ಅಭಿನಂದಿಸಲಾಯಿತು.

ಮುಖ್ಯ ಶಿಕ್ಷಕರಿಗೆ ಸನ್ಮಾನ:

ಮೇ ತಿಂಗಳಲ್ಲಿ ನಿವೃತ್ತಿ ಹೊಂದಲಿರುವ ಸಂಸ್ಥೆಯ ಹಿರಿಯ ಮುಖ್ಯೋಪಾಧ್ಯಾಯನಿ ಶಾಂತಾ ಅವರನ್ನು ಎಸ್. ಡಿ. ಎಂ. ಸಿ., ಶಿಕ್ಷಕ ಮತ್ತು ವಿದ್ಯಾರ್ಥಿ ವೃಂದ ಪರವಾಗಿ ಗೌರವಿಸಲಾಯಿತು.

ಸಹ ಶಿಕ್ಷಕ ಕಿರಣ್ ಕುಮಾರ್ ಸ್ವಾಗತಿಸಿ ಮಮತಾ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ರವಿರಾಜ್ ಗೌಡ ವಂದಿಸಿದರು.

error: Content is protected !!
Scroll to Top