ಜನರಿಗೆ ಕರೆಂಟ್‌ ಶಾಕ್‌ : ವಿದ್ಯುತ್‌ ದರ ಯೂನಿಟ್‌ಗೆ 56 ಪೈಸೆ ಹೆಚ್ಚಳ

ಮುಂದಿನ ತಿಂಗಳಿಂದ ಗೃಹ ಬಳಕೆದಾರರಿಗೆ ವಿದ್ಯುತ್‌ ಬರೆ

ಬೆಂಗಳೂರು: ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿ ರಾಜ್ಯದ ಜನರಿಗೆ ಶಾಕ್ ಕೊಟ್ಟಿದೆ. ಒಂದು ಯೂನಿಟ್‌ಗೆ 56 ಪೈಸೆ ಹೆಚ್ಚಳ ಮಾಡಿ ಕೆಇಆರ್‌ಸಿ ಆದೇಶ ಹೊರಡಿಸಿದೆ.

ನೂತನ ದರ ಮೇ ತಿಂಗಳಿನಿಂದ ಅನ್ವಯ ಆಗಲಿದೆ. 2024-25 ಆರ್ಥಿಕ ವರ್ಷದಲ್ಲಿ 34,084 ಕೋಟಿ ಕೆಇಆರ್‌ಸಿ ಆದಾಯ ನಿರೀಕ್ಷೆ ಮಾಡಿತ್ತು. ಆದರೆ 32,019 ಕೋಟಿಯಷ್ಟೇ ಆದಾಯ ಬಂದಿದೆ. ಹೀಗಾಗಿ 2,068 ಕೋಟಿ ಕೊರತೆಯನ್ನು ಗ್ರಾಹಕರಿಂದ ಸಂಗ್ರಹಿಸಲು ಕೆಇಆರ್‌ಸಿ ಆದೇಶ ಮಾಡಿದೆ. ಒಂದು ಯೂನಿಟ್‌ಗೆ 56 ಪೈಸೆ ಹೆಚ್ಚಳ ಮಾಡಿ ಆದೇಶಿಸಿದೆ. ಎಸ್ಕಾಂ ದರ ಹೆಚ್ಚಿಸುವಂತೆ ಸರ್ಕಾರಕ್ಕೆ ಕೆಇಆರ್‌ಸಿ ಮನವಿ ಮಾಡಿತ್ತು.























































 
 

ಕೆಇಆರ್‌ಸಿಯ ಈ ಆದೇಶವು ಏಪ್ರಿಲ್ 17, 2026 ರಂದು ಹೊರಬಿದ್ದಿದ್ದು, ಪರಿಷ್ಕೃತ ದರವು 2026 ರ ಮೇ 1 ರಿಂದ ಜಾರಿಗೆ ಬರಲಿದೆ. ಅಂದರೆ, ಮೇ ತಿಂಗಳಿನಲ್ಲಿ ಬರುವ ವಿದ್ಯುತ್ ಬಿಲ್‌ಗಳಲ್ಲಿ ಗ್ರಾಹಕರು ಈ ಹೆಚ್ಚುವರಿ 56 ಪೈಸೆ ‘ಟ್ರೂ ಅಪ್’ ದರವನ್ನು ಪಾವತಿಸಬೇಕಾಗುತ್ತದೆ. ಈ ವಸೂಲಾತಿಯು 2026-27ರ ಇಡೀ ಆರ್ಥಿಕ ವರ್ಷದಲ್ಲಿ ಅನ್ವಯವಾಗಲಿದ್ದು, ಏಪ್ರಿಲ್ 30, 2027 ರವರೆಗೆ ಮುಂದುವರಿಯಲಿದೆ.

ಗೃಹಬಳಕೆದಾರರು ಮಾತ್ರವಲ್ಲದೆ ವಾಣಿಜ್ಯ ಮತ್ತು ಕೈಗಾರಿಕಾ ಉದ್ದೇಶದ ವಿದ್ಯುತ್ ಗ್ರಾಹಕರಿಗೂ ಈ ಏರಿಕೆ ಅನ್ವಯವಾಗಲಿದೆ. ಉದಾಹರಣೆಗೆ, ಒಂದು ಮನೆ ತಿಂಗಳಿಗೆ 200 ಯೂನಿಟ್ ವಿದ್ಯುತ್ ಬಳಸಿದರೆ, ಆ ಮನೆಯ ಬಿಲ್‌ನಲ್ಲಿ ಕನಿಷ್ಠ 112 ರೂಪಾಯಿಗಳಷ್ಟು ಹೆಚ್ಚುವರಿ ಮೊತ್ತ ಸೇರ್ಪಡೆಯಾಗಲಿದೆ. ಬೃಹತ್ ಪ್ರಮಾಣದಲ್ಲಿ ವಿದ್ಯುತ್ ಬಳಸುವ ಕೈಗಾರಿಕೆಗಳಿಗೆ ಈ ದರ ಏರಿಕೆ ದೊಡ್ಡ ಹೊರೆಯಾಗಿ ಪರಿಣಮಿಸಲಿದೆ.

error: Content is protected !!
Scroll to Top