ಹಾಸನ: ಇಬ್ಬರು ಸಹೋದರರು ಕುರಿಯನ್ನು ತೊಳೆಯುವುದಕ್ಕಾಗಿ ಕೆರೆಗೆ ಇಳಿದಿದ್ದು, ಮುಳುಗಿ ಸಾವನ್ನಪ್ಪಿದ ಘಟನೆ ಅರಸೀಕೆರೆಯ ಜಾವಗಲ್‌ನಲ್ಲಿ ನಡೆದಿದೆ.
ಮೃತ ಬಾಲಕರನ್ನು ಯಾಸಿನ್(13) ಮತ್ತು ಇಮ್ರಾನ್(15) ಎಂದು ಗುರುತಿಸಲಾಗಿದೆ. ಎಂಟು ಮತ್ತು ಹತ್ತನೇ ತರಗತಿಯಲ್ಲಿ ಈ ಇಬ್ಬರು ಬಾಲಕರು ಕಲಿಯುತ್ತಿದ್ದರು.
ಬೇಸಿಗೆ ರಜೆಯಾದ್ದರಿಂದ ಇವರಿಬ್ಬರೂ ತಮ್ಮ ಕುರಿಗಳನ್ನು ತೊಳೆಯಲು ಜಾವಗಲ್ ದೊಡ್ಡಕೆರೆಗೆ ತೆರಳಿದ್ದರು. ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ಆಳವಾದ ಭಾಗಕ್ಕೆ ಬಿದ್ದು ಮೃತ ಪಟ್ಟಿದ್ದಾರೆ. ಒಬ್ಬರನ್ನೊಬ್ಬರು ರಕ್ಷಿಸುವ ಪ್ರಯತ್ನ ಮಾಡಿದ ಅವರು ಕೊನೆಗೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿದೆ.
ಸ್ಥಳೀಯರು ಮತ್ತು ಅಗ್ನಿಶಾಮಕ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯ ಮೂಲಕ ಬಾಲಕರ ಶವಗಳನ್ನು ಮೇಲೆತ್ತಲಾಗಿದೆ.
ಈ ಸಂಬಂಧ ಜಾವಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

























