ಮುಖಕ್ಕೆ ಬಟ್ಟೆ ಕಟ್ಟಿ, ಮಾರಕಾಸ್ತ್ರ ‌ಹಿಡಿದು ಅನುಮಾನಾಸ್ಪದ ತಿರುಗಾಟ: ಇಬ್ಬರ ಬಂಧನ

ಕಾರ್ಕಳ: ಮಾರಕಾಸ್ತ್ರಗಳನ್ನು ಹಿಡಿದು, ಮುಖಕ್ಕೆ ಬಟ್ಟೆ ಕಟ್ಟಿ ಸಾರ್ವಜನಿಕ ಸ್ಥಳದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಇಬ್ಬರು ಪೊಲೀಸರ ಅತಿಥಿಗಳಾಗಿದ್ದಾರೆ.

ಬಂಧಿತರನ್ನು ಕೊಪ್ಪಳದ ಗಂಗಾವತಿಯ ಹನುಮಪ್ಪ ಮತ್ತು ಕನಕಗಿರಿಯ ‌ಮರಿಯಪ್ಪ ಎಂದು ಗುರುತಿಸಲಾಗಿದೆ.

ಗುರುವಾರ ರಾತ್ರಿ ನಗರ ಪೊಲೀಸರು ಗಸ್ತಿನಲ್ಲಿದ್ದ ಸಮಯದಲ್ಲಿ ಕಾರ್ಕಳದ ಬಸ್ಸು ನಿಲ್ದಾಣ ಸಮೀಪದ ಹೂವಿನ ಅಂಗಡಿಯ ಎದುರಿನ ಗೂಡಂಗಡಿ ಹಿಂಭಾಗದಲ್ಲಿ ಆರೋಪಿಗಳು ಮುಖ ಮುಚ್ಚಿಕೊಂಡು, ಕೈಯಲ್ಲಿ ಚಾಕು ಹಿಡಿದು ನಿಂತಿದ್ದರು‌.























































 
 

ಪೊಲೀಸರನ್ನು ಕಂಡೊಡನೆ ಪರಾರಿಯಾಗಲು ಪ್ರಯತ್ನ ನಡೆಸಿದ್ದಾರೆ. ಪೊಲೀಸರ ಪ್ರಶ್ನೆಗೂ ಇವರು ಸಮರ್ಪಕ ಉತ್ತರ ನೀಡಿಲ್ಲ. ಯಾವುದೋ ದುಷ್ಕೃತ್ಯ ನಡೆಸಲು ಇವರು ಹೊಂಚು ಹಾಕುತ್ತಿದ್ದರು ಎಂಬ ಸಂದೇಹದ ‌ಮೇಲೆ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿದೆ.

error: Content is protected !!
Scroll to Top