ಮಂಗಳೂರು : ನಗರದ ಬಿಜೈ ಬಳಿಯ ಖಾಸಗಿ ಲಾಡ್ಜ್ವೊಂದರಲ್ಲಿ ಇರಿಸಿದ್ದ ಬ್ಯಾಗ್ನಿಂದ ಚಿನ್ನಾಭರಣ ಕಳವಾದ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಬಿಜೈ ಬಳಿಯ ಖಾಸಗಿ ಲಾಡ್ಜ್ನಲ್ಲಿ ತಾನು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಏ.13ರಂದು ಬೆಳಗ್ಗೆ 6.30ರಿಂದ ತಂಗಿದ್ದು, ಏ.15ರಂದು ಬೆಳಗ್ಗೆ 8.30ಕ್ಕೆ ತಣ್ಣೀರುಬಾವಿ ಬೀಚ್ಗೆ ಹೋಗುವ ವೇಳೆ ಬ್ಯಾಗ್ನಲ್ಲಿ ಲ್ಯಾಪ್ಟಾಪ್, ಮಕ್ಕಳ ಎರಡು ಉಂಗುರ, ಪತ್ನಿಯ ಒಂದು ಉಂಗುರ ಮತ್ತು ತನಗೆ ಸೇರಿದ ಬ್ರಾಸ್ಲೆಟ್ಗಳನ್ನಿಟ್ಟು ರೂಮ್ಗೆ ಲಾಕ್ ಮಾಡಿ ಕೀಯನ್ನು ಕೊಂಡು ಹೋಗಿದ್ದೆ.
ಅಂದು ಬೆಳಗ್ಗೆ 11.30ಕ್ಕೆ ವಾಪಸ್ ರೂಮ್ಗೆ ಬಂದು ಬ್ಯಾಗ್ಗಳನ್ನು ಪರಿಶೀಲಿಸಿದಾಗ ಒಡವೆಗಳನ್ನು ಇರಿಸಿದ್ದ ಪ್ಲಾಸ್ಟಿಕ್ ಬಾಕ್ಸ್ನಲ್ಲಿ ಸುಮಾರು 10 ಗ್ರಾಂ ತೂಕದ ತನ್ನ 1.40 ಲಕ್ಷ ರೂ. ಮೌಲ್ಯದ ಬ್ರಾಸ್ಲೆಟ್ ಇರಲಿಲ್ಲ. ಉಳಿದ ವಸ್ತುಗಳು ಯಥಾಸ್ಥಿತಿಯಲ್ಲಿದ್ದವು. ನಕಲಿ ಕೀ ಬಳಸಿ ಬಾಗಿಲು ತೆರೆದು ಕಳವು ಮಾಡಿರುವ ಸಾಧ್ಯತೆ ಇದೆ ಎಂದು ಎ.ಎನ್. ಶಿವ ಎಂಬವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

