ಲಾಹೋರ್: ಉಗ್ರ ಸಂಘಟನೆ ಲಷ್ಕರ್ ಎ ತೈಬಾದ ಸ್ಥಾಪಕ ಸದಸ್ಯ ಅಮೀರ್ ಹಮ್ಜಾನನ್ನು ಅಪರಿಚಿತ ಬಂದೂಕುಧಾರಿಗಳು ಲಾಹೋರಿನಲ್ಲಿ ಗುಂಡಿಕ್ಕಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಉಗ್ರ ಹಮ್ಜಾನ ಮೇಲೆ ಸುದ್ದಿ ವಾಹಿನಿಯೊಂದರ ಕಚೇರಿಯ ಹೊರಗೆ ದಾಳಿ ನಡೆಸಿರುವುದಾಗಿದೆ. ತೀವ್ರ ಗಾಯಗಳಾದ ಪರಿಣಾಮ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಈತ ಭಾರತದ ವಿರುದ್ಧವೂ ಹಲವಾರು ಭಯೋತ್ಪಾದಕ ಕೃತ್ಯಗಳನ್ನು ನಡೆಸಿದಾತ ಎಂದು ತಿಳಿದು ಬಂದಿದೆ.
ಅಮೀರ್ ಹಮ್ಮಾ ಅಫಘಾನ್ ಮುಜಾಹಿದ್ದೀನ್‌ನ ಹಿರಿಯ ಸದಸ್ಯ. ತನ್ನ ಉತ್ಕಟ ಭಾಷಣಗಳು ಮತ್ತು ಸಮೃದ್ದ ಬರವಣಿಗೆಗಳಿಗೆ ಹೆಸರುವಾಸಿಯಾಗಿದ್ದ ಹಮ್ಹಾ ಒಮ್ಮೆ ಎಲ್‌ಇಟಿಯ ಅಧಿಕೃತ ಪ್ರಕಟಣೆಯ ಸಂಪಾದಕನಾಗಿದ್ದ. 2002 ರಲ್ಲಿ ಖಾಫಿಲಾ ದ’ವತ್ ಔರ್ ಶಹಾದತ್ ಸೇರಿದಂತೆ ಹಲವಾರು ಪುಸ್ತಕಗಳನ್ನೂ ಬರೆದಿದ್ದಾನೆ. 2018 ರಲ್ಲಿ, ಪಾಕಿಸ್ತಾನಿ ಅಧಿಕಾರಿಗಳು ಎಲ್‌ಇಟಿ-ಸಂಯೋಜಿತ ದತ್ತಿ ಸಂಸ್ಥೆಗಳಾದ ಜಮಾತ್-ಉದ್-ದವಾ ಮತ್ತು ಫಲಾಹ್-ಎ-ಇನ್ಸಾನಿಯತ್ ಫೌಂಡೇಶನ್ ಮೇಲೆ ಆರ್ಥಿಕ ಸಂಕಷ್ಟ ಎದುರಾದ ನಂತರ, ಹಮ್ಹಾ ಲಷ್ಕರ್‌ನಿಂದ ದೂರ ಸರಿದನು ಎಂದು ವರದಿಯಾಗಿದೆ. ತರುವಾಯ ಆತ ಜೈಶ್-ಎ-ಮನ್‌ಕಾಫಾ ಎಂಬ ಹೆಸರಿನ ವಿಭಜಿತ ಗುಂಪನ್ನು ಸ್ಥಾಪಿಸಿದ್ದು, ಇದು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಇತರ ಪ್ರದೇಶಗಳಲ್ಲಿ ಉಗ್ರಗಾಮಿ ಕಾರ್ಯಾಚರಣೆಗಳನ್ನು ಮುಂದುವರೆಸುವ ಉದ್ದೇಶದಿಂದ ನಡೆಸಲಾಗುತ್ತಿತ್ತು ಎಂದು ಹೇಳಲಾಗಿದೆ.

























