ವಿಟ್ಲ: ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ದುರ್ಗಾನಗರ ಅಜ್ಜಿನಡ್ಕ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವಿಟ್ಲ ತಾಲೂಕು ಇವರ ಸಹಯೋಗದೊಂದಿಗೆ ಎ. 19 ಮತ್ತು ಎ. 2೦ ರಂದು ನಡೆಯುವ ಭಜನಾ ತರಬೇತಿ ಮತ್ತು ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಯಿತು.
ಈ ಶಿಬಿರದಲ್ಲಿ ಮಕ್ಕಳಲ್ಲಿ ಧಾರ್ಮಿಕ ಜಾಗೃತಿ, ಅಂಗೈಯಲ್ಲಿ ಆರೋಗ್ಯ, ಕ್ರೀಡೆ, ಕಾನೂನು ಮಾಹಿತಿ, ಕಲೆ, ಸಾಹಿತ್ಯ ಸದಭಿರುಚಿ, ಭಜನಾ ತರಬೇತಿ ಮುಂತಾದ ವಿಷಯಾಧಾರಿತವಾಗಿ ಸಂಪನ್ಮೂಲ ವ್ಯಕ್ತಿಗಳಿಂದ ತರಗತಿಗಳು ನಡೆಯಲಿವೆ.
ಈ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ನೀಡಿದ ಅನುದಾನವನ್ನು ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿಗಳಾದ ಸಂತೋಷ್ ಪಿ. ಅಳಿಯೂರು ಅವರು ಭಜನಾ ಮಂದಿರದ ಪದಾಧಿಕಾರಿಗಳಿಗೆ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ಭಜನಾ ಪರಿಷತ್ ಕೋಶಾಧಿಕಾರಿ ಜಯರಾಮ್ ರೈ ಕಲ್ಲಡ್ಕ, ಭಜನಾ ಮಂದಿರದ ಅಧ್ಯಕ್ಷ ಐತಪ್ಪ ಗೌಡ, ಕೋಶಾಧಿಕಾರಿ ರವಿಚಂದ್ರ, ಭಜನಾ ಮಂದಿರದ ಸದಸ್ಯರಾದ ಕರುಣಾಕರ ಅಜ್ಜಿನಡ್ಕ, ಆನಂದ ನಡುಸಾರು, ಅಕ್ಷತಾ, ಅಜ್ಜಿನಡ್ಕ ಸೇವಾಪ್ರತಿನಿಧಿ ಕಾವ್ಯ ಪಿ., ಕೃತಿಕ್ ಉಪಸ್ಥಿತರಿದ್ದರು.

























