ಮಂಗಳೂರು: ನಗರವನ್ನೇ ಹೆಚ್ಚು ಬೀಳಿಸಿದ್ದ ಆರಿಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಾದ ಅರ್ಷದ್, ಪು ಚರ್ಚೆ ನಿಸಾಕ್, ಜುನೈದ್‌ನನ್ನು ಬಂಧಿಸಲಾಗಿದೆ.
ಹತ್ಯೆಗೆ ಸಂಚು ಮಾಡಿದ ಮತ್ತು ದಾಳಿಗೆ ಸಹಾಯ ಮಾಡಿದ ಆರೋಪದಲ್ಲಿ ಈ ಬಂಧನ ನಡೆದಿದೆ. ತನಿಖಾ ವೇಳೆ ಈ ಕೊಲೆಗೆ ರೂಪಿಸಲಾಗಿದ್ದ ಮಾರಕ ಯೋಜನೆಗಳ ಬಗೆಗೂ ಬಯಲಾಗಿದೆ.
ಆರೋಪಿ ಅರ್ಷದ್ ಕೊಲೆಯ ಪ್ರಮುಖ ಸೂತ್ರಧಾರಿ ಆಗಿದ್ದು, ಈತ ಹಂತಕರಿಗೆ ಮಾರಕಾಸ್ತ್ರಗಳನ್ನು ಒದಗಿಸಿದ್ದ. ಜೊತೆಗೆ ಪೊಲೀಸರ ಕಾರ್ಯಾಚರಣೆಯ ಬಗೆಗೂ ಮಾಹಿತಿ ನೀಡುತ್ತಿದ್ದ. ಕೃತ್ಯಕ್ಕೆ ಆರ್ಥಿಕ ಮತ್ತು ವಾಹನದ ವ್ಯವಸ್ಥೆ ಸಹ ಒದಗಿಸಿದ್ದ. ನಿಸಾಕ್ ಎಂಬಾತ ಆರಿಫ್ ಮೇಲೆ ಈ ಹಿಂದೆಯೂ ದಾಳಿ ನಡೆಸಿದ್ದ. ಕಳೆದ ಬಾರಿ ನಡೆಸಿದ ವಿಫಲ ಹತ್ಯಾ ಪ್ರಯತ್ನದಲ್ಲೂ ಸಕ್ರಿಯನಾಗಿದ್ದ. ಜುನೈದ್ ಹಂತಕರಿಗೆ ವಾಹನ ಸೌಲಭ್ಯ ಒದಗಿಸಿದ್ದ. ಫೆಬ್ರವರಿಯಲ್ಲಿ ನಡೆಸಿದ ದಾಳಿಯ ತಂಡದಲ್ಲೂ ಗುರುತಿಸಿಕೊಂಡಿದ್ದ.

























