ಬೆಂಗಳೂರು: ಜ್ಯೂನಿಯರ್ ವಿದ್ಯಾರ್ಥಿಯನ್ನು ಸೀನಿಯರ್ಸ್ ಕಿಡ್ನಾಪ್ ಮಾಡಿದ ಘಟನೆ ಬೆಂಗಳೂರಿನ ಮಡಿವಾಳದಲ್ಲಿ ನಡೆದಿದೆ.
ಕಿಡ್ನಾಪ್ ಆದ ವಿದ್ಯಾರ್ಥಿಯನ್ನು ರಿಷಬ್ ಮೊಹಂತಿ(19) ಎಂದು ಗುರುತಿಸಲಾಗಿದ್ದು, ಈತ ಒಡಿಶಾದವನಾಗಿದ್ದಾನೆ. ನಗರದ ಪ್ರತಿಷ್ಟಿತ ಮ್ಯಾನೇಜ್ಮೆಂಟ್ ಕಾಲೇಜ್ ಒಂದರಲ್ಲಿ ಹಣಕ್ಕಾಗಿ ಈ ಘಟನೆ ನಡೆದಿದ್ದು, ಈ ಸಂಬಂಧ ಐವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ಕೇರಳದ ಶೌರ್ಯ, ಜಯನಗರದ ಸಯ್ಯದ್ ಬಿಲಾಲ್, ಬಿಹಾರದ ನಿಕುಂಜ್, ಮಹಾರಾಷ್ಟ್ರದ ಅದಿತಾ ರಾಕ್ಸಿ ಎಂದು ಗುರುತಿಸಲಾಗಿದೆ. ಬಂದಿತು ಪೈಕಿ ಮೂವರು ಕಿಡ್ನಾಪ್ ಆದ ವಿದ್ಯಾರ್ಥಿಯ ಹಾಸ್ಚೆಲ್‌ಮೇಟ್ಸ್ ಆಗಿದ್ದರು ಎಂದು ತಿಳಿದು ಬಂದಿದೆ.
ರಿಷಬ್ ಪಡೆದ ಸಾಲ ವಾಪಸ್ ನೀಡುತ್ತಿರಲಿಲ್ಲ. ಆದ್ದರಿಂದ ಆತನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದೆವು ಎಂಬುದಾಗಿ ಕಿಡ್ನಾಪರ್ಸ್ ಪೊಲೀಸರಿಗೆ ತಿಳಿಸಿದ್ದಾರೆ.

























