ಶ್ರೀರಾಮ ಪ್ರೌಢಶಾಲೆಯಲ್ಲಿ ಮಹಾಭಾರತ ರಸಪ್ರಶ್ನೆ ಸ್ಪರ್ಧೆ

ಉಪ್ಪಿನಂಗಡಿ: ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್(ರಿ) ಉಪ್ಪಿನಂಗಡಿ ಇದರ ಸುವರ್ಣ ಮಹೋತ್ಸವದ ಅಂಗವಾಗಿ ಉಪ್ಪಿನಂಗಡಿ ವೇದಶಂಕರ ನಗರದ ಶ್ರೀ ರಾಮ ಶಾಲೆಯಲ್ಲಿ ಶ್ರೀ ಮಹಾಭಾರತ ರಸ ಪ್ರಶ್ನೆ ಸ್ಪರ್ಧೆ ನಡೆಸಲಾಯಿತು. 6 ,7 ,8 ಮತ್ತು 9ನೇ ತರಗತಿಯ 75 ವಿದ್ಯಾರ್ಥಿಗಳು ಶ್ರೀ ಮಹಾಭಾರತ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಟ್ರಸ್ಟಿನ ಸದಸ್ಯ ಕೆ.ಮಹಾಲಿಂಗೇಶ್ವರ ಭಟ್ ಪೆರಿಯಡ್ಕ ಮಾತನಾಡಿ, ಮಹಾಭಾರತವು ಧರ್ಮಕ್ಕೆ ಜಯವೆಂಬ ಸಂದೇಶವನ್ನು ನೀಡುತ್ತದೆ. ಬಾಲ್ಯದಲ್ಲಿ ಓದುವ ಹವ್ಯಾಸ , ಕಲಾಸಕ್ತಿಯು ಜೀವನದಲ್ಲಿ ಸತ್ಪರಿಣಾಮವನ್ನು ಬೀರುತ್ತದೆ ಎಂದು ತಿಳಿಸಿದರು.

ಟ್ರಸ್ಟ್ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಮಾತನಾಡಿ, ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಮಹಾಭಾರತ ಸರಣಿ ತಾಳ ಮದ್ದಳೆ ಮತ್ತು ರಸಪ್ರಶ್ನೆ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದ್ದು ಶ್ರೀರಾಮ ಶಾಲೆಯಲ್ಲಿ ಅವಕಾಶ ಮಾಡಿಕೊಟ್ಟ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದರು.























































 
 

ಮುಖ್ಯ ಶಿಕ್ಷಕಿ ಉಷಾ ಮಾತನಾಡಿ ಮಹಾಭಾರತದ ರಸಪ್ರಶ್ನೆ ಸ್ಪರ್ಧೆಯು ಮಕ್ಕಳೊಂದಿಗೆ ಶಿಕ್ಷಕ ವೃಂದವು ಸ್ಪೂರ್ತಿಯನ್ನು ಪಡೆದಿದೆಯೆಂದರು.

ರಸಪ್ರಶ್ನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಅನಿಸಿಕೆಗಳನ್ನು ವ್ಯಕ್ತಪಡಿಸಿದರು .

ಉಷಾ ಮಾತಾಜಿ ಸ್ವಾಗತಿಸಿ ಟ್ರಸ್ಟಿನ ಕೋಶಾಧಿಕಾರಿ ಶ್ರುತಿ ವಿಸ್ಮಿತ್ ವಂದಿಸಿದರು.

error: Content is protected !!
Scroll to Top