ಚಿಕ್ಕಮಗಳೂರು: ಕಳೆದ ಮೂರು ದಿನಗಳಿಂದ ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತದ ಬಳಿ ನಾಪತ್ತೆಯಾಗಿದ್ದ ಕೇರಳದ 14 ವರ್ಷದ ಬಾಲಕಿ ಶ್ರೀನಂದಾ ಮೃತದೇಹ 2000 ಅಡಿ ಆಳದ ಪ್ರಪಾತದಲ್ಲಿ ಪತ್ತೆಯಾಗಿದೆ.
ಶ್ರೀನಂದಾ ಎಪ್ರಿಲ್ 7 ರಂದು ಕಾಣೆಯಾಗಿದ್ದರು. ಎಸ್.ಡಿ.ಆರ್.ಎಫ್. ಮತ್ತು ಪೊಲೀಸ್ ತಂಡಗಳ ತೀವ್ರ ಶೋಧ ಕಾರ್ಯದ ನಂತರ ಇಂದು ಮೃತದೇಹ ಪತ್ತೆಯಾಗಿದೆ.
ಸುಮಾರು 40 ಜನ ಪ್ರವಾಸಿಗರ ತಂಡದಲ್ಲಿ ಶ್ರೀನಂದಾ ಸಹ ಇದ್ದರು.
ಮಾಣಿಕ್ಯಧಾರಾ ಸಮೀಪ ಹಠತ್ತಾಗಿ ಶ್ರೀನಂದಾ ಕಾಣೆಯಾಗಿದ್ದರು. ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇಂದು ಅವರ ಮೃತ ದೇಹ ಪತ್ತೆಯಾಗಿದೆ. ಶ್ರೀನಂದಾ ಪತ್ತೆಗಾಗಿ ಎಸ್‌ಡಿಆರ್‌ಎಫ್ (SDRF), ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಹಾಗೂ ಎಎನ್ಎಫ್ (ANF) ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿದ್ದವು. ದಟ್ಟ ಅರಣ್ಯ ಮತ್ತು ಕಡಿದಾದ ಪರ್ವತ ಪ್ರದೇಶವಾದ್ದರಿಂದ ಡ್ರೋನ್ ಹಾಗೂ ಥರ್ಮಲ್ ಕ್ಯಾಮೆರಾಗಳನ್ನು ಸಹ ಬಳಸಲಾಗಿತ್ತು.
ಶ್ರೀನಂದಾ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಕಸ್ಮಿಕ ಸಾವೋ ಅಥವಾ ಇನ್ನೇನಾದರೂ ಸಂಭವಿಸಿದೆಯೇ ಎಂಬ ತನಿಖೆ ಮುಂದುವರೆಸಿದ್ದಾರೆ.

























