ಪುತ್ತೂರು ಜಾತ್ರೆಯಲ್ಲಿ ಅಹಿತಕರ ಘಟನೆ ಸಂಭವಿಸದಂತೆ ಎಚ್ಚರ ವಹಿಸಲು ಸರ್ಕಾರದ ಎಂಟು ಇಲಾಖೆಗಳಿಗೆ ಪತ್ರ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರತಿಭಟನೆ, ಅಹಿತಕರ ಘಟನೆಗಳು ಸಂಭವಿಸದ ಹಾಗೆ ಸೂಕ್ತ ರಕ್ಷಣೆ ಒದಗಿಸುವಂತೆ ಆರ್. ಕೆ. ಪಾಂಗಣ್ಣಾಯ ಅವರು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಎಂಟು ಇಲಾಖೆಗಳಿಗೆ ಮನವಿ ಸಲ್ಲಿಸಿದ್ದಾರೆ.

ಪುತ್ತೂರಿನ ಪಿ. ಜಿ. ಜಗನ್ನಿವಾಸ ರಾವ್ ಅವರ ಪುತ್ರ ಯುವತಿಯೊಬ್ಬಳಿಗೆ ಮದುವೆಯಾಗುವ ಭರವಸೆ ನೀಡಿ ಮಗು ಕರುಣಿಸಿ ಕೈಕೊಟ್ಟ ಘಟನೆಗೆ ಸಂಬಂಧಿಸಿದ ಹಾಗೆ ಸಂತ್ರಸ್ತ ಯುವತಿಯ ತಾಯಿ ಜಾತ್ರೆಯ ಧ್ವಜಾರೋಹಣದ ದಿನ ಧ್ವಜ ಕಂಬದಡಿ ಕುಳಿತು ಪ್ರತಿಭಟನೆ ನಡೆಸುವುದಾಗಿ ಹೇಳಿದ್ದರು. ಈ ಬಗ್ಗೆ ಕಳವಳ‌ ವ್ಯಕ್ತಪಡಿಸಿರುವ ಅವರು, ಈ ರೀತಿ ನಡೆದುಕೊಳ್ಳಲು ಯಾರಿಗೂ ಅವಕಾಶ ಇಲ್ಲ. ನ್ಯಾಯಕ್ಕಾಗಿ ಒಂದೋ ದೇವರಲ್ಲಿ ಪ್ರಾರ್ಥನೆ ಮಾಡಬೇಕು ಇಲ್ಲವೇ ಮಿನಿ ವಿಧಾನ ಸೌಧದ ಮುಂದೆ ಪ್ರತಿಭಟನೆ ನಡೆಸಬೇಕು. ಅದು ಬಿಟ್ಟು ಜಾತ್ರೆಗೆ ಅಡ್ಡಿ ಮಾಡುವುದು ಸರಿಯಾದ ಕ್ರಮವಲ್ಲ ಎಂದು ತಿಳಿಸಿದ್ದಾರೆ.

ಇಂತಹ ಘಟನೆ ನಡೆದು ಧ್ವಜಾರೋಹಣ ತಡವಾದಲ್ಲಿ ಅದು ಮಹಾಲಿಂಗೇಶ್ವರನ ಭಕ್ತರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಈ ಹಿನ್ನೆಲೆ ಆ ದಿನದಂದು ಯಾವುದೇ ಅನುಚಿತ ಘಟನೆ ಸಂಭವಿಸಿದ ಹಾಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.























































 
 

ಇದೇ ಸಂದರ್ಭದಲ್ಲಿ ಪಿ.ಜಿ. ಜಗನ್ನಿವಾಸ ರಾವ್ ಬಗ್ಗೆಯೂ ಮಾತನಾಡಿರುವ ಅವರು, ಕಳೆದ ಇಪ್ಪತ್ತು ವರ್ಷಗಳಿಂದ ಯಾವುದೇ ಸಂಭಾವನೆ ಪಡೆಯದೆ ಅವರು ದೇವಾಲಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅದರಿಂದಾಗಿ ದೇವಾಲಯಕ್ಕೆ ಕೋಟ್ಯಾಂತರ ರೂ. ಲಾಭವಾಗಿದೆ ಎಂದು ನುಡಿದಿದ್ದಾರೆ.

error: Content is protected !!
Scroll to Top