ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ ಕದನ ವಿರಾಮ
ಬೆಂಗಳೂರು: ಅಮೆರಿಕ-ಇರಾನ್ ನಡುವೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಮೂಡಿದೆ. ತೈಲ ಬೆಲೆಗಳು ಇಳಿಕೆಯಾಗಿದ್ದು, ಲೋಹಗಳ ಮೇಲಿನ ಹೂಡಿಕೆ ಹೆಚ್ಚಳವಾದ ಹಿನ್ನೆಲೆ ಭಾರಿ ಬೇಡಿಕೆ ಸೃಷ್ಟಿಯಾಗಿ, ಚಿನ್ನ ಬೆಳ್ಳಿ ದರಗಳು ಭಾರಿ ಏರಿಕೆ ಕಂಡಿವೆ. ಯುದ್ಧದ ಸಂದರ್ಭದಲ್ಲಿ ಚಿನ್ನದ ಬೆಲೆ ತುಸು ಇಳಿಕೆ ಕಂಡಿತ್ತು.
ಏಪ್ರಿಲ್ 8ರಂದು 24 ಕ್ಯಾರೆಟ್ 10 ಗ್ರಾಂ ನಲ್ಲಿ 3,980 ರೂ ಏರಿಕೆ ಆಗಿ 1,53,820 ರೂಪಾಯಿ ಬೆಲೆ ದಾಖಲಾಗಿದೆ. 1 ಗ್ರಾಂ ಬೆಲೆ ಇಂದು 398 ರೂ ಏರಿಕೆ ಆಗಿದ್ದು, 15,382 ರೂ ದಾಖಲಾಗಿದೆ.
22 ಕ್ಯಾರೆಟ್ 1 ಗ್ರಾಂ ಬೆಲೆ 365 ರೂ ಏರಿಕೆ ಆಗಿ 14,100 ರೂ ಆಗಿದ್ದು 10 ಗ್ರಾಂ ಬೆಲೆಯಲ್ಲಿ 3650 ರೂ ಏರಿಕೆಯಾಗಿ, 1,41,000 ರೂಪಾಯಿಗೆ ತಲುಪಿದೆ.
ಬೆಳ್ಳಿ ಬೆಲೆ ಇಂದು 10 ರೂಪಾಯಿ ಹೆಚ್ಚಳವಾಗಿದ್ದು, ಗ್ರಾಂ ಬೆಲೆ 260 ರೂಪಾಯಿ ಹಾಗೂ ಕೆಜಿ ಬೆಲೆ 2,60,000 ರೂ ಬೆಲೆ ಇದೆ.

























