ಬಂಟ್ವಾಳ : ಸ್ಕೂಟರ್‌ ಕಳ್ಳರ ಬಂಧನ

ಬಂಟ್ವಾಳ : ದ್ವಿಚಕ್ರ ವಾಹನ ಕಳ್ಳತನ ಪ್ರಕರಣವನ್ನು ಭೇದಿಸಿದ ಬಂಟ್ವಾಳ ಪಟ್ಟಣ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಕದ್ದ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಮಾರ್ಚ್ 21ರಂದು ಪರ್ಲಿಯಾದಲ್ಲಿರುವ ವಸತಿಗೃಹದ ಶೆಡ್‌ನಲ್ಲಿ ನಿಲ್ಲಿಸಿದ್ದ ಸ್ಕೂಟರನ್ನು ಕಳವು ಮಾಡಲಾಗಿತ್ತು.

ಬಂಟ್ವಾಳದ ಸಜೀಪ್ ಮುನ್ನೂರು ನಿವಾಸಿ ಹಸನ್ ಬಾವ (55) ಮತ್ತು ಬಂಟ್ವಾಳದ ಬಿಮೂಡ ನಿವಾಸಿ ಮೊಹಮ್ಮದ್ ಇರ್ಷಾದ್ (37) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಕದ್ದ ಸ್ಕೂಟರ್ ಸುಮಾರು 50,000 ರೂ. ಮೌಲ್ಯದ್ದಾಗಿದ್ದು, ಆರೋಪಿಗಳಿಂದ ಅದನ್ನು ವಶಪಡಿಸಿಕೊಳ್ಳಲಾಗಿದೆ.

error: Content is protected !!
Scroll to Top