ಬೆಂಗಳೂರಿನ ಹುಡುಗಿಯನ್ನು ವರಿಸಿದ ಕುಂಭಮೇಳದ ಐಐಟಿ ಬಾಬಾ

ಕುಂಭಮೇಳದಲ್ಲಿ ಐಐಟಿ ಬಾಬಾ ಎಂದು ವೈರಲ್‌ ಆಗಿದ್ದ ಬಾಬಾ

ಬೆಂಗಳೂರು : ಮಹಾಕುಂಭ ಮೇಳದ ಸಂದರ್ಭದಲ್ಲಿ ‘ಐಐಟಿ ಬಾಬಾ’ ಎಂದು ಜನಪ್ರಿಯರಾಗಿದ್ದ ನಾಗಸಾಧು ಅಭಯ್ ಸಿಂಗ್‌ ಬೆಂಗಳೂರಿನ ಯುವತಿಯನ್ನು ಮದುವೆಯಾಗಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಕುಂಭಮೇಳದಲ್ಲಿ ಐಐಟಿಯಂಥ ಉನ್ನತ ಶಿಕ್ಷಣ ಪಡೆದಿದ್ದರೂ ಕೂಡ ನಾಗಸಾಧುವಾಗಿದ್ದ ಕಾರಣಕ್ಕೆ ಹರಿಯಾಣದ ಜಜ್ಝರ್ ಮೂಲದವರಾದ ಅಭಯ್ ಮಹಾಕುಂಭದಲ್ಲಿ ವೈರಲ್ ಆಗಿದ್ದರು.

ಈಗ ಮದುವೆಯ ನಂತರ ಪತ್ನಿ ಪ್ರೀತಿಕ್ ಜೊತೆ ತಮ್ಮ ಊರಿಗೆ ಬಂದಿದ್ದಾರೆ. ಅವರು ಬರುತ್ತಿದ್ದಂತೆ, ಅವರನ್ನು ನೋಡಲು, ಸೆಲ್ಫಿ ತೆಗೆದುಕೊಳ್ಳಲು ಜನ ಮುಗಿಬಿದ್ದಿದ್ದಾರೆ. ಅಭಯ್ ಮತ್ತು ಅವರ ಪತ್ನಿ ಜಜ್ಝರ್‌ನಲ್ಲಿ ಬ್ಯಾಂಕ್ KYC ಪ್ರಕ್ರಿಯೆ ಪೂರ್ಣಗೊಳಿಸಲು ಬಂದಿದ್ದರು. ಆದರೆ ಈ ಭೇಟಿ ಕೇವಲ ಅಷ್ಟಕ್ಕೇ ಸೀಮಿತವಾಗಿರಲಿಲ್ಲ. ಈ ಸಮಯದಲ್ಲಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ತಮ್ಮ ಮುಂದಿನ ಯೋಜನೆಗಳ ಬಗ್ಗೆಯೂ ವಿವರಿಸಿದರು. ಜಜ್ಝರ್‌ನಲ್ಲಿ ತಮ್ಮ ತಂದೆ ಕರ್ಣ್ ಸಿಂಗ್ ಗ್ರೆವಾಲ್ ಅವರ ಚೇಂಬರ್‌ನಲ್ಲಿ ಸ್ವಲ್ಪ ಸಮಯ ಕಳೆದರು. ಅಲ್ಲಿ ಅವರನ್ನು ನೋಡಲು ಜನ ಉದ್ದನೆಯ ಸಾಲಿನಲ್ಲಿ ನಿಂತಿದ್ದರು.























































 
 

ಐಐಟಿ ಬಾಬಾ ಜಜ್ಝರ್‌ಗೆ ಬಂದ ತಕ್ಷಣ, ಅವರನ್ನು ನೋಡಲು ಜನ ಮುಗಿಬಿದ್ದರು. ಪ್ರತಿಯೊಬ್ಬರೂ ಅವರೊಂದಿಗೆ ಫೋಟೋ ತೆಗೆದುಕೊಳ್ಳಲು ಬಯಸಿದ್ದರು. ಪತ್ನಿ ಪ್ರೀತಿಕ್ ಬೆಂಗಳೂರಿನವರು ಮತ್ತು ಇಬ್ಬರ ಆಲೋಚನೆಗಳು ಒಂದೇ ರೀತಿ ಇವೆ ಎಂದು ಅಭಯ್ ತಿಳಿಸಿದರು. ಅವರು ಈಗ ಕೇವಲ ವೈಯಕ್ತಿಕ ಜೀವನಕ್ಕಾಗಿ ಅಲ್ಲ, ಬದಲಾಗಿ ಒಂದು ದೊಡ್ಡ ಉದ್ದೇಶಕ್ಕಾಗಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದೇ ಕಾರಣಕ್ಕೆ, ಅವರ ಮದುವೆಯನ್ನು ಜನರು ಕೇವಲ ವೈಯಕ್ತಿಕ ನಿರ್ಧಾರವಾಗಿ ನೋಡದೆ, ಒಂದು ಹೊಸ ದಿಕ್ಕಿನ ಆರಂಭವೆಂದು ನೋಡುತ್ತಿದ್ದಾರೆ. ಫೆಬ್ರವರಿ 15 ರಂದು ಹಿಮಾಚಲ ಪ್ರದೇಶದ ಅಘಂಜರ್ ಮಹಾದೇವ ದೇವಸ್ಥಾನದಲ್ಲಿ ಇವರು ಮದುವೆಯಾಗಿದ್ದು, ಫೆಬ್ರವರಿ 19 ರಂದು ಕೋರ್ಟ್ ಮ್ಯಾರೇಜ್ ಮಾಡಿಕೊಂಡಿದ್ದಾರೆ.

error: Content is protected !!
Scroll to Top