ಇಸ್ರೇಲ್‌ ಮೇಲೆ ಇರಾನ್‌ ಭೀಕರ ದಾಳಿ : ಹಲವು ಸಾವು

15ಕ್ಕೂ ಹೆಚ್ಚು ಕಡೆಗಳಲ್ಲಿ ಸ್ಫೋಟ, ಬಹುಮಹಡಿ ಕಟ್ಟಡಗಳು ಗುರಿ

ಟೆಹ್ರಾನ್‌: ಅಮೆರಿಕ-ಇಸ್ರೇಲ್‌ ನಡೆಸಿದ ಜಂಟಿ ದಾಳಿಯಲ್ಲಿ ಸಂಭವಿಸಿದ 34 ಮಂದಿ ಸಾವಿಗೆ ಇರಾನ್‌ ಭೀಕರವಾಗಿ ಪ್ರತೀಕಾರ ತೀರಿಸಿಕೊಂಡಿದೆ. ಉತ್ತರ ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಇಸ್ರೇಲ್‌ನ ಹೈಫಾ ನಗರ ಸೇರಿದಂತೆ ಸುಮಾರು 15 ಕ್ಕೂ ಹೆಚ್ಚು ಕಡೆಗಳಲ್ಲಿ ಭಾರಿ ಸ್ಫೋಟ ಸಂಭವಿಸಿದೆ.

ಹೈಫಾದಲ್ಲಿ ಬಹುಮಹಡಿ ಕಟ್ಟಡಗಳಿಗೆ ಹಾನಿಯಾಗಿದೆ. ಈ ಮಧ್ಯೆ ಕತಾರ್, ಟರ್ಕಿ ಮಧ್ಯಸ್ಥಿಕೆ ತಿರಸ್ಕರಿಸಿದ ಇರಾನ್, ಅಮೆರಿಕ ಜೊತೆ ಮಾತುಕತೆ ಅಗತ್ಯವಿಲ್ಲ. ಯಾರ ಮಧ್ಯಸ್ಥಿಕೆಯೂ ಇನ್ನು ಮುಂದೆ ಅಗತ್ಯವಿಲ್ಲ ಎಂದು ಮಧ್ಯಸ್ಥಿಕೆಗೆ ಬಂದ ಕತಾರ್, ಟರ್ಕಿಗೆ ಇರಾನ್ ಸಂದೇಶ ನೀಡಿದೆ. ದಕ್ಷಿಣ ಇಸ್ರೇಲ್‌ನ ಡಿಮೋನಾ ಪ್ರದೇಶದ ಬಳಿಯ ಪೆಟ್ರೋಕೆಮಿಕಲ್ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ನಡೆಸಿದೆ.























































 
 

ಇದರ ಜೊತೆಗೆ ಕುವೈತ್‌ನ ಬುಬಿಯಾನ್ ದ್ವೀಪದಲ್ಲಿರುವ ಅಮೆರಿಕ ಮಿಲಿಟರಿ ನೆಲೆಗಳನ್ನು ಡ್ರೋನ್‌ಗಳ ಮೂಲಕ ಗುರಿಯಾಗಿಸಿಕೊಂಡಿರುವುದಾಗಿ ಇರಾನ್ ಹೇಳಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನ ಪೆಟ್ರೋಕೆಮಿಕಲ್ ಸ್ಥಾವರದ ಮೇಲೆ ದಾಳಿ ನಡೆದ ನಂತರ ಬೆಂಕಿ ಕಾಣಿಸಿಕೊಂಡಿದೆ. ಅಬುಧಾಬಿ ಮಾಧ್ಯಮ ಕಚೇರಿಯ ಪ್ರಕಾರ, ಹಾನಿಯನ್ನು ನಿರ್ಣಯಿಸುವವರೆಗೆ ಸ್ಥಾವರದಲ್ಲಿನ ಕಾರ್ಯಾಚರಣೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ. ಅದೃಷ್ಟವಶಾತ್, ಇಲ್ಲಿಯವರೆಗೆ ಯಾವುದೇ ಗಾಯಗಳು ವರದಿಯಾಗಿಲ್ಲ.

ಇದಕ್ಕೂ ಮುನ್ನ ಇರಾನ್‌ನ ಹಲವಾರು ಪ್ರಾಂತ್ಯಗಳನ್ನು ಗುರಿಯಾಗಿಸಿ ಅಮೆರಿಕ – ಇಸ್ರೇಲ್‌ ನಡೆಸಿದ ಜಂಟಿ ದಾಳಿಯಲ್ಲಿ ಸೋಮವಾರ (ಇಂದ) ಒಂದೇ ದಿನ ಇರಾನ್‌ನ 34 ಜನ ಸಾವನ್ನಪ್ಪಿದ್ದಾರೆ. ವರದಿಗಳ ಪ್ರಕಾರ, ರಾಜಧಾನಿ ಟೆಹ್ರಾನ್‌ನಲ್ಲಿ 23 ಜನರು, ಕೋಮ್ ನಗರದಲ್ಲಿ 5 ಜನರು ಮತ್ತು ದಕ್ಷಿಣ ನಗರವಾದ ಬಂದರ್-ಎ ಲೆಂಗೆಯಲ್ಲಿ 6 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ 6 ಮಕ್ಕಳು ಸೇರಿವೆ.

error: Content is protected !!
Scroll to Top