ಕಾಂಗ್ರೆಸ್‌ನೊಳಗಿನ ಭಿನ್ನಮತವನ್ನು ಬಯಲಿಗೆಳೆದ ಮಧ್ಯಪ್ರಾಚ್ಯ ಯುದ್ಧ

ಮೋದಿಗೆ ಹಿರಿಯ ನಾಯಕರ ಹೊಗಳಿಕೆ; ರಾಹುಲ್‌ ಗಾಂಧಿ ಟೀಕೆ

ನವದೆಹಲಿ: ಆಪರೇಷನ್ ಸಿಂದೂರ ಬಳಿಕ ಇದೀಗ ಮಧ್ಯಪ್ರಾಚ್ಯ ಯುದ್ಧ ಕಾಂಗ್ರೆಸ್‌ನಲ್ಲಿ ಹಿರಿಯ ನಾಯಕರು ಮತ್ತು ರಾಹುಲ್‌ ಗಾಂಧಿ ನಡುವಿನ ಭಿನ್ನಮತವನ್ನು ಬಯಲಿಗೆ ತಂದಿದೆ. ಇರಾನ್‌-ಇಸ್ರೇಲ್‌-ಅಮೆರಿಕ ಯುದ್ಧದ ಸಂದರ್ಭದಲ್ಲಿ ಮೋದಿ ಸರ್ಕಾರದ ರಾಜತಾಂತ್ರಿಕ ನಡೆ, ತೈಲ ನಿರ್ವಹಣೆಯನ್ನು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಸಾಧ್ಯವಾದಷ್ಟು ಟೀಕಿಸಿದರೆ, ಶಶಿ ತರೂರ್‌ ಸೇರಿ ನಾಲ್ಕೈದು ಹಿರಿಯ ಕಾಂಗ್ರೆಸ್‌ ಮುಖಂಡರು ಕೇಂದ್ರವನ್ನು ತಾರೀಪು ಮಾಡುತ್ತಿದ್ದಾರೆ.

ಮೋದಿ ಸರ್ಕಾರದಡಿ ಭಾರತದ ವಿದೇಶಾಂಗ ನೀತಿ ರಾಜಿಗೊಳಗಾಗಿದೆ. ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಪೂರೈಕೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ರಾಹುಲ್‌ ಆರೋಪಿಸಿದರೆ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಕೇಂದ್ರ ಸರ್ಕಾರ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೊಗಳಿದ್ದಾರೆ.























































 
 

ಕಾಂಗ್ರೆಸ್‌ ಸಂಸದ ಮನೀಷ್ ತಿವಾರಿ ಕೇಂದ್ರ ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಿದೆ ಎಂದು ಹೇಳಿದರೆ, ಮಾಜಿ ಸಚಿವ ಆನಂದ್‌ ಶರ್ಮಾ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್‌ ಕೂಡ ಮೋದಿ ಸರ್ಕಾರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಧ್ಯಪ್ರಾಚ್ಯ ಸಂಘರ್ಷ ವಿಚಾರದಲ್ಲಿ ಭಾರತದ ರಾಜತಾಂತ್ರಿಕ ನಡೆ ಪ್ರಬುದ್ಧ ಮತ್ತು ಕೌಶಲಪೂರ್ಣವಾಗಿದೆ ಎಂದು ಶರ್ಮಾ ಹೇಳಿಕೊಂಡರೆ, ದೇಶದಲ್ಲಿ ಎಲ್‌ಪಿಜಿ ಪೂರೈಕೆ ಕೊರತೆ ಆಗಿಲ್ಲ. ಕೊರತೆ ಇದೆ ಎನ್ನುವಂಥ ವಾತಾವರಣ ಸೃಷ್ಟಿಸಲಾಗಿದೆ ಅಷ್ಟೆ ಎಂದು ಕಮಲ್‌ನಾಥ್‌ ಅಭಿಪ್ರಾಯಪಟ್ಟಿದ್ದಾರೆ.

error: Content is protected !!
Scroll to Top