ಆರ್‌ಎಸ್‌ಎಸ್‌ ಶಿಬಿರಗಳ ಮೇಲೆ ದಾಳಿ : ಪಾಕಿಸ್ಥಾನದ ಬೆದರಿಕೆಗೆ ಆಕ್ರೋಶ

ಆರ್‌ಎಸ್‌ಎಸ್ ಶಿಬಿರಗಳ ಮೇಲೆ ದಾಳಿ ಮಾಡುತ್ತೇವೆ ಎಂದ ಪಾಕ್‌ ಸಚಿವ

ನವದೆಹಲಿ: ಪಾಕಿಸ್ತಾನ ಮತ್ತು ಭಾರತದ ನಡುವೆ ಮತ್ತೆ ಉದ್ವಿಗ್ನತೆ ಕಾಣಿಸಿಕೊಂಡಿದೆ. ಗಡಿ ಉದ್ವಿಗ್ನತೆಯ ನಡುವೆ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಆರ್‌ಎಸ್‌ಎಸ್‌ ಶಿಬಿರಗಳ ಮೇಲೆ ದಾಳಿ ಮಾಡುವ ಕುರಿತು ಭಾರತಕ್ಕೆ ಬಹಿರಂಗ ಬೆದರಿಕೆಯೊಡ್ಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಮುಂದಿನ ಬಾರಿ ಉಭಯ ರಾಷ್ಟ್ರಗಳ ನಡುವೆ ಸಂಘರ್ಷ ನಡೆದರೆ ಅದು ಕೇವಲ 200-250 ಕಿ.ಮೀ.ಗೆ ಸೀಮಿತವಾಗಿರುವುದಿಲ್ಲ. ನಾವು ಭಾರತದ ಗಡಿಯೊಳಗೆ ನುಗ್ಗಿ, ಅವರ ಮನೆಗಳೊಳಗೆ ಹಾಗೂ ಆರ್‌ಎಸ್‌ಎಸ್ ಶಿಬಿರಗಳ ಮೇಲೆ ದಾಳಿ ಮಾಡುತ್ತೇವೆ ಎಂದು ಖ್ವಾಜಾ ಆಸಿಫ್ ಹೇಳಿದ್ದಾರೆ.





















































 
 

ಮತ್ತೆ ಭಾರತ-ಪಾಕಿಸ್ತಾನ ನಡುವೆ ಸಂಘರ್ಷ ಎದುರಾಗಿದ್ದೇ ಆದರೆ, ನಮ್ಮ ದಾಳಿ ಕೇವಲ ಗಡಿಭಾಗಕ್ಕೆ ಸೀಮಿತವಾಗದೇ, ಗಡಿ ನುಗ್ಗಿ ಆರ್‌ಎಸ್‌ಎಸ್ ಶಿಬಿರಗಳು ಹಾಗೂ ಮನೆಗಳ ಮೇಲೆ ನೇರ ದಾಳಿ ನಡೆಸುತ್ತೇವೆಂದು ಭಾರತಕ್ಕೆ ನೇರ ಬೆದರಿಕೆ ಹಾಕಿದ್ದಾರೆ.

ಪಾಕಿಸ್ತಾನವು ಗಡಿಯಲ್ಲಿ ಯಾವುದೇ ದುಸ್ಸಾಹಸಕ್ಕೆ ಕೈಹಾಕಿದರೆ ಹಿಂದೆಂದೂ ಕಾಣದ ರೀತಿಯಲ್ಲಿ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಗುರುವಾರ ಖಡಕ್ ಎಚ್ಚರಿಕೆ ನೀಡಿದ್ದರು.

ಈ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್, ಭವಿಷ್ಯದಲ್ಲಿ ಯಾವುದೇ ಸಂಘರ್ಷ ಉಂಟಾದರೆ, ಪಾಕಿಸ್ತಾನ ತನ್ನ ಸೇನೆ ಮೂಲಕ ಭಾರತದ ಆಂತರಿಕ ಪ್ರದೇಶಗಳಿಗೆ RSS ಶಿಬಿರಗಳು ಮತ್ತು ಮನೆಗಳ ಮೇಲೆ ದಾಳಿ ನಡೆಸಲಿದೆ. ಈ ದಾಳಿ ಗಡಿಭಾಗಕ್ಕಷ್ಟೇ ಸೀಮಿತವಾಗಿರುವುದಿಲ್ಲ ಎಂದು ಗೊಡ್ಡು ಬೆದರಿಕೆ ಹಾಕಿದ್ದಾರೆ.

ಪಾಕಿಸ್ತಾನವು ಶಾಂತಿ ಮತ್ತು ಪ್ರಾದೇಶಿಕ ಸ್ಥಿರತೆಯನ್ನು ಕಾಪಾಡಲು ಬದ್ಧವಾಗಿದೆ, ಆದರೆ ಯಾವುದೇ ಪ್ರಚೋದನೆ ಎದುರಾದರೆ, ಸ್ವಾತಂತ್ರ್ಯ ರಕ್ಷಣೆಗೆ ಪೂರ್ಣ ಸಜ್ಜಾಗಿರುತ್ತದೆ. ಈ ಬಾರಿ ಸಂಘರ್ಷ ಎದುರಾದರೆ, ಆ ದಾಳಿ ಗಡಿ ಭಾಗಕ್ಕೆ ಸೀಮಿತವಾಗಿರುವುದಿಲ್ಲ. ಭಾರತದ ಆಂತರಿಕ ತಾಣಗಳನ್ನು ಪೂರ್ತಿಯಾಗಿ ಗುರಿಯಾಗಿಸಲಾಗುವುದು ಎಂದು ಹೇಳಿದ್ದಾರೆ.

error: Content is protected !!
Scroll to Top