ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಇಚ್ಚೂರು ಉರುವಾಲು ಇಲ್ಲಿನ ವಾರ್ಷಿಕ ಜಾತ್ರೆಯ ಪ್ರಯುಕ್ತ ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್ ಸುವರ್ಣ ವರ್ಷದ ನಿಮಿತ್ತ ಶ್ರೀ ಮಹಾಭಾರತ ಸರಣಿಯ 109 ಮತ್ತು 110ನೇ ತಾಳಮದ್ದಳೆ ಜರಗಿತು.

ಕವಿ ಗೆರೆಸೊಪ್ಪೆ ಶಾಂತಪ್ಪಯ್ಯ ವಿರಚಿತ ರುದ್ರ ಭೀಮ ಪ್ರಸಂಗದಲ್ಲಿ ಭಾಗವತರಾಗಿ ಮಹೇಶ್ ಕನ್ಯಾಡಿ, ಹಿಮ್ಮೇಳದಲ್ಲಿ ಲಕ್ಷ್ಮೀಶ ಅಮ್ಮಣ್ಣಾಯ, ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ ಅರ್ಥಧಾರಿಗಳಾಗಿ ಗಣರಾಜ ಕುಂಬ್ಳೆ(ಭೀಮಸೇನ)ಜಯರಾಮ ಬಲ್ಯ (ದುಶ್ಯಾಸನ)ಜಿನೇಂದ್ರ ಜೈನ್ (ದ್ರೌಪದಿ)ದಿವಾಕರ ಆಚಾರ್ಯ ಗೇರುಕಟ್ಟೆ(ಶ್ರೀಕೃಷ್ಣ),ಶ್ರೀಧರ ಎಸ್ಪಿ ಕೃಷ್ಣಾಪುರ (ಅರ್ಜುನ) ಕಿರಿಯ ಬಲಿಪ ನಾರಾಯಣ ಭಾಗವತ ರಚಿತ ಅಶ್ವತ್ಥಾಮ ಪ್ರಸಂಗದಲ್ಲಿ ಭಾಗವತರಾಗಿ ಮಹೇಶ ಕನ್ಯಾಡಿ ,ನಿತೀಶ್ ಕುಮಾರ್. ವೈ, ಪದ್ಮನಾಭ ಕುಲಾಲ್ ಇಳಂತಿಲ ಹಿಮ್ಮೇಳದಲ್ಲಿ ಲಕ್ಷ್ಮೀಶ ಅಮ್ಮಣ್ಣಾಯ, ಶ್ರೀಪತಿ ಭಟ್ ಕೆ.ಬಿ ಉಪ್ಪಿನಂಗಡಿ, ಗುರುಮೂರ್ತಿ ಅಮ್ಮಣ್ಣಾಯ, ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ ಅರ್ಥಧಾರಿಗಳಾಗಿ ದಿವಾಕರ ಆಚಾರ್ಯ ಗೇರುಕಟ್ಟೆ (ಶ್ರೀಕೃಷ್ಣ),ಸತೀಶ ಶಿರ್ಲಾಲು (ಅಶ್ವತ್ಥಾಮ),ಪೂರ್ಣಿಮಾ ಪುತ್ತೂರಾಯ (ಭಾಗ್ಯಲಕ್ಷ್ಮಿ) ದಿನೇಶ್ ಭಟ್ ಬಳೆಂಜ (ಕೌರವ ಮತ್ತು ವ್ಯಾಸ)ಸಂಜೀವ ಪಾರೆಂಕಿ (ಕೃಪಾಚಾರ್ಯ)ಪ್ರದೀಪ ಹೆಬ್ಬಾರ್(ಕೃತ ವರ್ಮ) ಜಯರಾಮ ಬಲ್ಯ(ದೃಷ್ಟದ್ಯುಮ್ನ )ಶ್ರೀಧರ ಎಸ್ಪಿ ಕೃಷ್ಣಾಪುರ(ಭೀಮಸೇನ)ಜಿನೇಂದ್ರ ಜೈನ್ ಬಳ್ಳಮಂಜ(ದ್ರೌಪದಿ) ಭಾಗವಹಿಸಿದ್ದರು.
ದೇವಳದ ಅರ್ಚಕರಾದ ಸುರೇಶ ಪುತ್ತೂರಾಯ ಎಲ್ಲಾ ಕಲಾವಿದರನ್ನು ಶಾಲುಹೊದಿಸಿ ಗೌರವಿಸಿದರು. ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟಿನ ಅಧ್ಯಕ್ಷ ದಿವಾಕರ್ ಆಚಾರ್ಯ ಗೇರುಕಟ್ಟೆ ಸ್ವಾಗತಿಸಿ ಕಾರ್ಯದರ್ಶಿ ಶ್ರೀಪತಿ ಭಟ್ ವಂದಿಸಿದರು.

























